ದಾವಣಗೆರೆ : ರಕ್ಷಾ ಬಂಧನದ ಅಂಗವಾಗಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಅಧಿಕಾರಿ ಸಿಬ್ಬಂದಿಗಳಿಗೆ ರಾಖಿ ಕಟ್ಟುವ ಮೂಲಕ ಜಿಲ್ಲೆಯ ಎಲ್ಲಾ ಅಧಿಕಾರಿ ಸಿಬ್ಬದಿಗಳಿಗೆ ರಕ್ಷಾ ಬಂಧನದ ಶುಭಕೋರಿದರು




ದಾವಣಗೆರೆ : ರಕ್ಷಾ ಬಂಧನದ ಅಂಗವಾಗಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಅಧಿಕಾರಿ ಸಿಬ್ಬಂದಿಗಳಿಗೆ ರಾಖಿ ಕಟ್ಟುವ ಮೂಲಕ ಜಿಲ್ಲೆಯ ಎಲ್ಲಾ ಅಧಿಕಾರಿ ಸಿಬ್ಬದಿಗಳಿಗೆ ರಕ್ಷಾ ಬಂಧನದ ಶುಭಕೋರಿದರು




ಉಡುಪಿ : ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಬೀಟ್ ವ್ಯಾಪ್ತಿಯ ಪ್ರಮುಖರನ್ನು ಠಾಣೆಗೆ ಬರಮಾಡಿಕೊಂಡು, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ, ದ್ರಷ್ಟಿ ಯೋಜನೆ, ಇ- ಬೀಟ್ ವ್ಯವಸ್ಥೆ ಬಗ್ಗೆ ತಿಳುವಳಿಕೆ ನೀಡಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಾಯಿತು.

ಈ ದಿನ ರೋಣ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಿಗೇರಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ಶಾಲೆಯಲ್ಲಿ ಮಕ್ಕಳಿಗೆ ಬಾಲ್ಯ ವಿವಾಹ, ಬಾಲ ಕಾರ್ಮಿಕ, ಪೋಕ್ಸೋ ಕಾಯ್ದೆ , ಭಿಕ್ಷಾಟನೆ ಹಾಗೂ ತುರ್ತು ಸಹಾಯವಾಣಿಗಳ ಕುರಿತು ಕಾನೂನು ಅರಿವು ಹಾಗೂ ನೆರವು ಬಗ್ಗೆ ಮಾಹಿತಿ ನೀಡಲಾಯಿತು.


ರಾತ್ರಿ ಮೇಟಗಳ್ಳಿ ಪೊಲೀಸ್ ಠಾಣೆಯ ಅಧಿಕಾರಿ & ಸಿಬ್ಬಂದಿಗಳು ತಮ್ಮ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು, ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಹಾಗೂ ರೌಡಿಗಳು/ಎಂಒಬಿಗಳು / ಸಮಾಜ ಘಾತುಕ ವ್ಯೆಕ್ತಿಯಗಳ ಮೇಲೆ ನಿಗಾವಹಿಸಲು ಕಾಲ್ನಡಿಗೆ ಮೂಲಕ ವಿಶೇಷ ಗಸ್ತು ಮಾಡಿ ತಮ್ಮ ಠಾಣಾ ವ್ಯಾಪ್ತಿಯ ಪ್ರದೇಶಗಳ ಮೇಲೆ ನಿಯಂತ್ರಣ ಹೊಂದುವ ಸಲುವಾಗಿ ಅನುಮಾನಸ್ಪದ ವ್ಯೆಕ್ತಿಗಳು & ವಾಹನಗಳನ್ನು ತಪಾಸಣೆ ನಡೆಸಲಾಯಿತು.







ಮೈಸೂರು ನಗರದ ಮಂಡಿ, ನಜರ್ ಬಾದ್, ಕೃಷ್ಣರಾಜ & ವಿದ್ಯಾರಣ್ಯ ಪುರಂ ಪೊಲೀಸ್ ಠಾಣೆಗಳ ಅಧಿಕಾರಿಗಳು & ಸಿಬ್ಬಂದಿಗಳಿಂದ ಠಾಣಾ ವ್ಯಾಪ್ತಿಯಲ್ಲಿ ಬೀಟ್ ಸಭೆ ನಡೆಸಿದ್ದು, ಬೀಟ್ ಸದಸ್ಯರ ಸಮಸ್ಯೆಗಳನ್ನು ಮನಪೂರ್ವಕವಾಗಿ ಆಲಿಸಿ, ಬಿಟ್ ಸದಸ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಪ್ರದೇಶದ ಭದ್ರತೆ, ಶಂಕಿತ ಚಟುವಟಿಕೆಗಳ ಬಗ್ಗೆ ತಕ್ಷಣ ಮಾಹಿತಿ ನೀಡುವುದು, ಹಾಗೂ ಅಪರಾಧ ತಡೆಗೆ ಬಿಟ್ ಸದಸ್ಯರ ಪಾತ್ರ ಇತ್ಯಾದಿ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು.





ಇಂದು ಡಿ.ಎ.ಆರ್ ಮೈದಾನದಲ್ಲಿ 3 ದಿನಗಳ ಕಾಲ ನಡೆಯುವ “INDEPENDENCE DAY CUP” POLICE PREMIER LEAGUE SEASON – 03 ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ನ್ನು ಶ್ರೀ ಅಡ್ಡೂರು ಶ್ರೀನಿವಾಸುಲು IPS, ಪೊಲೀಸ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಉದ್ಘಾಟಿಸಿ, ಈ ಕ್ರಿಕೆಟ್ ಕ್ರೀಡಾ ಕೂಟದಲ್ಲಿ ಒಟ್ಟು 10 ಪೊಲೀಸ್ ತಂಡಗಳು ಭಾಗವಹಿಸಿದ್ದು ಎಲ್ಲಾ ತಂಡಗಳಿಗೆ ಶುಭ ಕೋರಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಮಹೇಶ ಮೇಘಣ್ಣವರ ಮತ್ತು DAR DSP ರವರಾದ ಶರಣಪ್ಪ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.






ಕೋಲಾರ ಜಿಲ್ಲಾ ಪೊಲೀಸ್ ವತಿಯಿಂದ ಪ್ರತಿ ದಿನ ಅಧಿಕಾರಿ ಸಿಬ್ಬಂದಿಗಳು ಅಪರಾಧ ತಡೆಯುವ ನಿಟ್ಟಿನಲ್ಲಿ ದೈನಂದಿನ ಕರ್ತವ್ಯದೊಂದಿಗೆ ನಗರದಲ್ಲಿ ರಾತ್ರಿ ವಿಷೇಶ ಗಸ್ತು ಕರ್ತವ್ಯವನ್ನು ಕೈಗೊಂಡು ಪ್ರಮುಖ ಸಾರ್ವಜನಿಕ ಸ್ಥಳಗಲಾದ ದೇವಸ್ಥಾನ, ಮಸೀದಿ, ಬಸ್ ನಿಲ್ದಾಣ, ಲಾಡ್ಜ್ ಗಳಿಗೆ ಭೇಟಿ ನೀಡಿ ಹಾಗೂ ಸಂಶಯಾಸ್ಪದ ವ್ಯಕ್ತಿಗಳನ್ನು ಮತ್ತು ATM, ಮತ್ತು ವಾಹನಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.
















ಹಳಿಯಾಳ: ಜುಲೈ 16 ರಂದು ನಡೆದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಹಳಿಯಾಳ ಪೊಲೀಸರು, ಮಹಾರಾಷ್ಟ್ರದ ಕುಖ್ಯಾತ ಅಂತರರಾಜ್ಯ ಕಳ್ಳರ ತಂಡವನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು ₹7.95 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ₹4 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಪಂಡರಾಪುರ ವ್ಯಾಪ್ತಿಗೆ ಸೇರಿದ ಕುಖ್ಯಾತ ಕಳ್ಳರಾದ ಲಖನ ಅಶೋಕ ಕುಲಕರ್ಣಿ (31), ಸಂದೀಪ ದಿಲೀಪ ಲವಟೆ (25), ವಿವೇಕ ಶಿವಪ್ಪ ಕುಂಬಾರ (26), ಮತ್ತು ಅಜೀಜ್ ಅಲಿಯಾಸ್ ಚೋಟೆ ದಾದಾಪೀರ ಮನಗುಳಿ (28) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.
ಪೊಲೀಸ್ ವಿಚಾರಣೆ ವೇಳೆ, ಈ ಕಳ್ಳರ ತಂಡ ಯಲ್ಲಾಪುರ ಮತ್ತು ಕುಂದಾಪುರದಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದೆ. ಈ ಆರೋಪಿಗಳ ಮೇಲೆ ಈಗಾಗಲೇ 32ಕ್ಕೂ ಹೆಚ್ಚು ಕಳ್ಳತನ, ಸುಲಿಗೆ, ದರೋಡೆ ಮತ್ತು ಹಲ್ಲೆ ಪ್ರಕರಣಗಳು ವಿವಿಧ ರಾಜ್ಯಗಳ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇವುಗಳಲ್ಲಿ ಮೂರು ಪ್ರಕರಣಗಳಲ್ಲಿ ಇವರಿಗೆ ಶಿಕ್ಷೆಯೂ ಆಗಿದೆ.
ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ. ಎನ್., ಹೆಚ್ಚುವರಿ ಅಧೀಕ್ಷಕ ಜಗದೀಶ ನಾಯ್ಕ ಮತ್ತು ಇತರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಳಿಯಾಳ ಪಿಎಸ್ಐಗಳಾದ ಬಸವರಾಜ ಮಬನೂರ ಮತ್ತು ಕೃಷ್ಣ ಅರಕೇರಿ ಅವರ ನೇತೃತ್ವದ ಕಾರ್ಯಾಚರಣೆಯಲ್ಲಿ ಗಣಪತಿ, ಶ್ರೀಶೈಲ್ ಜಿ.ಎಂ., ವಿನೋದ ಜಿ.ಬಿ., ಲಕ್ಷ್ಮಣ ಪೂಜಾರಿ, ಅರವಿಂದ ಭಜಂತ್ರಿ, ಮಂಜುನಾಥ ಬಾಲಿ, ಆಯಾಜ್ ಯಾದವಾಡ, ಕಾಶಿನಾಥ ಬಿಳ್ಳೂರ, ವಿನಾಯಕ ನಾಯ್ಕ, ಯೋಗೇಶ ಗೌಡಾ ಹಾಗೂ ದಾಂಡೇಲಿ ಠಾಣೆಯ ಸಿಬ್ಬಂದಿಗಳಾದ ಕೃಷ್ಣ ಬೆಳ್ಳಿವರಿ, ಉದಯ ಗುನಗಾ, ಉಮೇಶ ತೇಲಿ ಭಾಗವಹಿಸಿದ್ದರು. ಈ ಯಶಸ್ವಿ ಕಾರ್ಯಾಚರಣೆಗೆ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮೈಸೂರು: ಜೆಎಸ್ಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ನರಸಿಂಹರಾಜ ಸಂಚಾರ ಠಾಣೆಯ ಅಧಿಕಾರಿಗಳಿಂದ ರಸ್ತೆ ಸುರಕ್ಷತೆ, ಸಂಚಾರ ನಿಯಮಗಳು ಮತ್ತು ನಾಗರಿಕ ನಡವಳಿಕೆಯ ಕುರಿತು ಅರಿವು ಮೂಡಿಸಲಾಯಿತು.



ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನದಂತೆ ಮುಡಬಿ ಪೊಲೀಸ್ ಠಾಣೆಯ ಪಿ.ಎಸ್.ಐ ಕು. ಜಯಶ್ರೀ ರವರು ತಮ್ಮ ಸಿಬ್ಬಂದಿ ರವರೊಂದಿಗೆ ತಮ್ಮ ಠಾಣೆಯಲ್ಲಿ ಶಾಲಾ ಮಕ್ಕಳಿಗೆ ಈಗಿನಿಂದಲೇ ಕಾನೂನಿನ ಬಗ್ಗೆ ಅರಿವು ಮೂಡಿಸಿದ್ದಲ್ಲಿ ಉತ್ತಮವಾದ ಸಮಾಜವನ್ನು ರೂಪಿಸುವಲ್ಲಿ ಕೊಡುಗೆ ನೀಡುವವರಾಗಿದ್ದರಿಂದ ಮಕ್ಕಳಿಗೆ ಕಾನೂನುಗಳ ಬಗ್ಗೆ, ಸಂಚಾರ ನಿಯಮ, ಪೊಕ್ಸೊ, ಜೆ.ಜೆ ಕಾಯ್ದೆ ಹಾಗೂ ಇತರೆ ಕಾನೂನಿನ ಬಗ್ಗೆ ಮತ್ತು ಪೊಲೀಸ್ ಕಾರ್ಯ ವೈಖರಿ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿರುತ್ತಾರೆ. ಮಕ್ಕಳಿಗೆ ಉತ್ತಮ ಜ್ಞಾನವನ್ನು ಮೂಡಿಸುವ ಮಹತ್ವದ ಕಾರ್ಯದಲ್ಲಿ ತೊಡಗಿದ ಪೊಲೀಸ್ ಅಧಿಕಾರಿ, ಸಿಬ್ಬಂದಿರವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

