ಬೆಂಗಳೂರಿನಲ್ಲಿ ಬಾಂಗ್ಲಾ ನೆಲೆಗಳ ಮೇಲೆ ಪೊಲೀಸ್ ಬೇಟೆ…!

ಬೆಂಗಳೂರು ಮಹಾನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗಳ ವಿರುದ್ಧ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.ಎಲೆಕ್ಟ್ರಾನ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್ ಅವರ ನಿರ್ದೇಶನದಂತೆ, ಎಲೆಕ್ಟ್ರಾನ್ ಸಿಟಿ ಉಪ ವಿಭಾಗದ ಎಸಿಪಿ ಕೆ.ಎನ್. ಸತೀಶ್ ಅವರ ಮಾರ್ಗದರ್ಶನದಲ್ಲಿ ಬೇಗೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸಂದೀಪ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಬಳಿಕ ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ, ಅವರನ್ನು ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಯಾವ್ಯಾವ ಠಾಣೆಗಳ ವ್ಯಾಪ್ತಿಯಲ್ಲಿ ಪತ್ತೆ?

ಅಕ್ರಮ ವಲಸಿಗರ ಪತ್ತೆ ಕಾರ್ಯಾಚರಣೆಯಲ್ಲಿ ಹಲವು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನೆಲೆಸಿದ್ದವರನ್ನು ವಶಕ್ಕೆ ಪಡೆಯಲಾಗಿದೆ. ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 9 ಮಂದಿ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 12 ಮಂದಿ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ,ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು.. ಇದರ ಜೊತೆಗೆ, ಬಂಡೆಪಾಳ್ಯ, ಹುಳಿಮಾವು, ಹೆಣ್ಣೂರು ಹಾಗೂ ನಂದಗುಡಿ ಪೊಲೀಸ್ ಠಾಣೆಗಳ ವ್ಯಾಪ್ತಿಯಿಂದ ತಲಾ ಒಬ್ಬರಂತೆ ಬಾಂಗ್ಲಾದೇಶದ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ ಸುಮಾರು 40ಕ್ಕೂ ಹೆಚ್ಚು ಬಾಂಗ್ಲಾ ಪ್ರಜೆಗಳನ್ನ ಪೊಲೀಸರು ವಶಕ್ಕೆ ಪಡೆದು ಬಿಎಸ್‌ಎಫ್‌ಗೆ  ಹಸ್ತಾಂತರಿಸಿದ್ದಾರೆ.

ಬೆಂಗಳೂರು ಯಾವ ಏರಿಯಾಗಳಲ್ಲಿ ನೆಲೆಸಿದ್ದರು?

ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತ ಪ್ರವೇಶಿಸಿದ ಬಳಿಕ ಈ ಮಂದಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ನೆಲೆಸಿದ್ದರು ಎನ್ನಲಾಗಿದೆ.ವಿಶೇಷವಾಗಿ ಎಲೆಕ್ಟ್ರಾನ್ ಸಿಟಿ, ಬೇಗೂರು, ಪರಪ್ಪನ ಅಗ್ರಹಾರ, ಬೊಮ್ಮನಹಳ್ಳಿ, ಜಿಗಣಿ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇವರ ವಾಸದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು.ಆದರೆ ಇವರು ನಿಖರವಾಗಿ ಯಾವ ಪ್ರದೇಶದಲ್ಲಿ, ಯಾವ ವಿಳಾಸದಲ್ಲಿ ಹಾಗೂ ಎಷ್ಟು ದಿನಗಳಿಂದ ವಾಸವಾಗಿದ್ದರು ಎಂಬುದರ ಕುರಿತು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

ಬೆಂಗಳೂರಿನಲ್ಲಿ ಏನು ಕೆಲಸ ಮಾಡುತ್ತಿದ್ದರು?

ಇನ್ನು ಅಕ್ರಮವಾಗಿ ನೆಲೆಸಿದ್ದ ಈ ಬಾಂಗ್ಲಾದೇಶದ ಪ್ರಜೆಗಳು ಬೆಂಗಳೂರಿನಲ್ಲಿ ಯಾವ ರೀತಿಯ ಉದ್ಯೋಗ ಮಾಡುತ್ತಿದ್ದರು ಎಂಬುದೂ ಇದೀಗ ತನಿಖೆಯ ಪ್ರಮುಖ ಅಂಶವಾಗಿದೆ.ಕಟ್ಟಡ ನಿರ್ಮಾಣ ಕೆಲಸ, ದಿನಗೂಲಿ, ಗೃಹ ಕೆಲಸ, ಕಾರ್ಖಾನೆ ಅಥವಾ ಇತರೆ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿದ್ದರೇ?ಅಥವಾ,ಬಾಂಗ್ಲಾದೇಶದಿಂದ ಬಂದು ಬೆಂಗಳೂರಿನಲ್ಲಿ ನಿರ್ದಿಷ್ಟ ಉದ್ಯೋಗದ ಹೆಸರಿನಲ್ಲಿ ನೆಲೆಸಿದ್ದರೇ? ಎಂಬುದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಬೇಕಿದೆ.‘ಈ ಕುರಿತ ಸಂಪೂರ್ಣ ಮಾಹಿತಿ ತನಿಖೆ ಬಳಿಕವೇ ಸ್ಪಷ್ಟವಾಗಲಿದೆ.

ಬಾಡಿಗೆ ಮನೆನಾ? ಶೆಡ್‌ಗಳಲ್ಲೇ ವಾಸ?

ಇನ್ನೊಂದು ಪ್ರಮುಖ ಪ್ರಶ್ನೆಏನಪ್ಪ ಅಂದ್ರೆ ಬೆಂಗಳೂರಿಗೆ ಬಂದಿದ್ದ ಈ ಮಂದಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದರೇ? ಅಥವಾ ನಿರ್ಮಾಣ ಹಂತದ ಕಟ್ಟಡಗಳು, ಶೆಡ್‌ಗಳು ಹಾಗೂ ಕಾರ್ಮಿಕರ ವಸತಿ ಪ್ರದೇಶಗಳಲ್ಲಿ ನೆಲೆಸಿದ್ದರೇ?ಅವರ ವಾಸದ ಸ್ಥಳಗಳ ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದು, ಮನೆ ಮಾಲೀಕರು, ಕಟ್ಟಡ ಮಾಲೀಕರು ಹಾಗೂ ಮಧ್ಯವರ್ತಿಗಳ ಪಾತ್ರವೂ ತನಿಖೆಯ ವ್ಯಾಪ್ತಿಗೆ ಬರಬಹುದಾಗಿದೆ.ಅಕ್ರಮ ವಲಸಿಗರಿಗೆ ಬಾಡಿಗೆ ಮನೆ ನೀಡುವ ಮುನ್ನ ದಾಖಲೆಗಳ ಪರಿಶೀಲನೆ ನಡೆದಿತ್ತೇ ಎಂಬ ಪ್ರಶ್ನೆಯೂ ಇದೀಗ ಮುನ್ನೆಲೆಗೆ ಬಂದಿದೆ.ಹೀಗಾಗಿ ಈ ಎಲ್ಲಾ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.ಅಕ್ರಮ ವಲಸಿಗರ ಪತ್ತೆಯೊಂದಿಗೆ, ಬೆಂಗಳೂರಿನಲ್ಲಿ ಇವರಿಗೆ ಆಶ್ರಯ ನೀಡಿದವರು ಹಾಗೂ ನೆರವಾದವರ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ.

Related Articles

TRENDING ARTICLES