CEIR ತಂತ್ರಜ್ಞಾನಕ್ಕೆ ಸಕ್ಸಸ್; 1,834 ಕಳವು ಮೊಬೈಲ್‌ಗಳ ಪತ್ತೆ

ಮೊಬೈಲ್ ಕಳೆದುಕೊಂಡು ಆತಂಕಕ್ಕೊಳಗಾಗಿದ್ದ ಸಾರ್ವಜನಿಕರಿಗೆ ಮಲ್ಕಾಜಿಗಿರಿ ಪೊಲೀಸರು ಗುಡ್‌ನ್ಯೂಸ್ ನೀಡಿದ್ದಾರೆ.CEIR ಅಂದ್ರೆ ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ ಪೋರ್ಟಲ್ ಮೂಲಕ ತಾಂತ್ರಿಕವಾಗಿ ಶೋಧ ನಡೆಸಿ, ಕಳೆದುಹೋದ ಹಾಗೂ ಕಳ್ಳತನವಾಗಿದ್ದ ಮೊಬೈಲ್ ಫೋನ್‌ಗಳನ್ನು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.

ಕಳೆದ ಏಳು ತಿಂಗಳಲ್ಲಿ ಇದೇ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವ ಮಲ್ಕಾಜಿಗಿರಿ ಪೊಲೀಸ್ ಕಮಿಷನರೇಟ್, ಒಟ್ಟು 1,834 ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ಮರುಪಡೆಯುವಲ್ಲಿ ಯಶಸ್ವಿಯಾಗಿದೆ.

ಪತ್ತೆಯಾದ ಮೊಬೈಲ್‌ಗಳ ಕುರಿತು ಮಾಹಿತಿ ಲಭಿಸಿದ ಸಂತ್ರಸ್ತರು, ಸಂಬಂಧಪಟ್ಟ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರನ್ನು ಸಂಪರ್ಕಿಸಬೇಕು.ಸೂಕ್ತ ದಾಖಲೆಗಳು ಹಾಗೂ ಪರಿಶೀಲನಾ ಪ್ರಮಾಣಪತ್ರಗಳನ್ನು ಸಲ್ಲಿಸಿದ ಬಳಿಕ, ಪತ್ತೆಯಾದ ತಮ್ಮ ಮೊಬೈಲ್ ಫೋನ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಮೊಬೈಲ್ ಕಳೆದುಕೊಂಡವರು ಅಥವಾ ಮೊಬೈಲ್ ಕಳ್ಳತನವಾದವರು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ತಕ್ಷಣ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.ಅಲ್ಲದೇ, CEIR ಪೋರ್ಟಲ್‌ನಲ್ಲಿ ಮೊಬೈಲ್‌ನ ಅಗತ್ಯ ವಿವರಗಳನ್ನು ನೋಂದಾಯಿಸುವಂತೆ ಸೂಚಿಸಲಾಗಿದೆ.

ತಂತ್ರಜ್ಞಾನ ಆಧಾರಿತ ಕಾರ್ಯಾಚರಣೆಗಳ ಮೂಲಕ ಸಾರ್ವಜನಿಕರ ಬೆಲೆಬಾಳುವ ಆಸ್ತಿಯನ್ನು ಮರಳಿ ತಲುಪಿಸುವ ನಿಟ್ಟಿನಲ್ಲಿ ಮಲ್ಕಾಜಿಗಿರಿ ಪೊಲೀಸರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Related Articles

TRENDING ARTICLES