ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ: ಐಆರ್‌ಬಿ ಮೈದಾನ ಪರಿಶೀಲನೆ, ಪೂರ್ವಭಾವಿ ಸಭೆ

ಮುನಿರಾಬಾದ್ ಐಆರ್‌ಬಿ ಘಟಕದಲ್ಲಿ ನಡೆಯಲಿರುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆ ಹಿನ್ನೆಲೆಯಲ್ಲಿ, ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ರಾಮ್ ಎಲ್. ಅರಸಿದ್ದಿ, ಐಪಿಎಸ್ ಹಾಗೂ ಐಆರ್‌ಬಿ ಮುನಿರಾಬಾದ್ ಕಮಾಂಡೆಂಟ್ ಕೆ.ಬಿ. ದೊರಮಣಿ ಭೀಮಯ್ಯ, ಕೆಎಸ್‌ಪಿಎಸ್ ಅವರು ಐಆರ್‌ಬಿ ಮೈದಾನವನ್ನು ಪರಿಶೀಲಿಸಿದರು.

ದೈಹಿಕ ಪರೀಕ್ಷೆ ಸುಗಮವಾಗಿ ಹಾಗೂ ಪಾರದರ್ಶಕವಾಗಿ ನಡೆಯುವಂತೆ ಮೈದಾನದಲ್ಲಿನ ವ್ಯವಸ್ಥೆಗಳು, ಪರೀಕ್ಷಾ ಸ್ಥಳ ಹಾಗೂ ಅಗತ್ಯ ಸಿದ್ಧತೆಗಳನ್ನು ಪರಿಶೀಲಿಸಲಾಯಿತು.

ಬಳಿಕ ನೇಮಕಾತಿ ಪ್ರಕ್ರಿಯೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಅಭ್ಯರ್ಥಿಗಳಿಗೆ ಅಗತ್ಯ ಸೌಲಭ್ಯಗಳು ಹಾಗೂ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವ ಕುರಿತು ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಲಾಯಿತು.

ನೇಮಕಾತಿ ದೈಹಿಕ ಪರೀಕ್ಷೆಯನ್ನು ಯಾವುದೇ ಲೋಪವಿಲ್ಲದೆ, ನಿಯಮಾನುಸಾರ ಹಾಗೂ ಪಾರದರ್ಶಕವಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

Related Articles

TRENDING ARTICLES