ಪ್ರಾಮಾಣಿಕತೆ ಮೆರೆದ ಪತ್ರಕರ್ತ – ಪತ್ತೆಯಾದ ಮೊಬೈಲ್ ವಾರಸುದಾರರಿಗೆ ಹಸ್ತಾಂತರ

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಸಂತೆ ಮಾರುಕಟ್ಟೆಯ ಆಂಜನೇಯ ವೃತ್ತದ ಬಳಿ ಪತ್ರಕರ್ತ ಭಾರತ ವೈಭವ್ ಅವರಿಗೆ ಮೊಬೈಲ್ ಫೋನ್‌ವೊಂದು ಪತ್ತೆಯಾಗಿದೆ.

ಪತ್ತೆಯಾದ ಮೊಬೈಲ್ ಫೋನ್‌ ಅನ್ನು ತಮ್ಮ ಬಳಿಯೇ ಇಟ್ಟುಕೊಳ್ಳದೆ, ಭಾರತ ವೈಭವ್ ಅವರು ಕಲಘಟಗಿ ಪೊಲೀಸ್ ಠಾಣೆಗೆ ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.

ನಂತರ ಪೊಲೀಸರು ಮೊಬೈಲ್‌ ಫೋನ್‌ನ ವಾರಸುದಾರರನ್ನು ಪತ್ತೆಹಚ್ಚಿ, ಸೂಕ್ತ ಪರಿಶೀಲನೆಯ ಬಳಿಕ ವಾರಸುದಾರರಿಗೆ ಮೊಬೈಲ್‌ ಅನ್ನು ಹಸ್ತಾಂತರಿಸಿದ್ದಾರೆ.

ಪತ್ತೆಯಾದ ವಸ್ತುವನ್ನು ಪೊಲೀಸರಿಗೆ ಒಪ್ಪಿಸಿ, ವಾರಸುದಾರರಿಗೆ ತಲುಪಿಸುವಲ್ಲಿ ಸಹಕರಿಸಿದ ಪತ್ರಕರ್ತ ಭಾರತ ವೈಭವ್ ಅವರ ಪ್ರಾಮಾಣಿಕ ನಡೆಗೆ ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿದೆ.

Related Articles

TRENDING ARTICLES