ಪರಪ್ಪನ ಅಗ್ರಹಾರ ಜೈಲಲ್ಲಿ ಪ್ರಜ್ವಲ್ ಬಳಿ ಮೊಬೈಲ್ ಪತ್ತೆ: ಡಿಐಜಿ ಜಿನೇಂದ್ರ ಕಣಗಾವಿ ತನಿಖೆ ಚುರುಕು

ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆಯಾದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಜೈಲು ಅಕ್ರಮದ ಕುರಿತು ತನಿಖೆ ನಡೆಸುತ್ತಿರುವ ಡಿಐಜಿ ಜಿನೇಂದ್ರ ಕಣಗಾವಿ, ಜೈಲು ಎಸ್‌ಪಿ ಅನ್ಷುಕುಮಾರ್ ಅವರ ಸಂಪೂರ್ಣ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ಬಳಿ ಮೊಬೈಲ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಡಿಐಜಿ ಜಿನೇಂದ್ರ ಕಣಗಾವಿ, ಜೈಲು ಎಸ್‌ಪಿ ಅನ್ಷುಕುಮಾರ್ ಅವರಿಂದ ಸ್ಟೇಟ್‌ಮೆಂಟ್ ಪಡೆದಿದ್ದಾರೆ.

ಬ್ಯಾರಕ್ ವಿಸಿಟ್ ವೇಳೆ ಯಾವುದೇ ಅಕ್ರಮಗಳು ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಎಸ್‌ಪಿ ಹೇಳಿಕೆ ನೀಡಿದ್ದಾರೆ. ಪ್ರಜ್ವಲ್‌ಗೆ ಮೊಬೈಲ್ ಯಾರು ನೀಡಿದರು ಎಂಬುದು ತಮಗೆ ಗೊತ್ತಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.


ಇನ್ನು ಪ್ರಜ್ವಲ್ ಜೈಲು ಯೂನಿಫಾರ್ಮ್ ಧರಿಸದ ವಿಚಾರವಾಗಿ ಎಎಸ್‌ಪಿಗೆ ನಿಗಾ ವಹಿಸುವಂತೆ ಸೂಚಿಸಿದ್ದೆ ಎಂದು ಎಸ್‌ಪಿ ತಿಳಿಸಿದ್ದಾರೆ. ಜೈಲು ನಿಯಮಾವಳಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿತ್ತು. ಈ ವಿಚಾರದಲ್ಲಿ ಯಾರಿಗೂ ಯಾವುದೇ ವಿನಾಯಿತಿ ನೀಡದಂತೆ ಸೂಚಿಸಿದ್ದೆ ಎಂದೂ ಹೇಳಿಕೆ ನೀಡಿದ್ದಾರೆ.


ಜೈಲು ಎಸ್‌ಪಿಯ ಸಂಪೂರ್ಣ ಸ್ಟೇಟ್‌ಮೆಂಟ್ ದಾಖಲಿಸಿಕೊಂಡಿರುವ ಡಿಐಜಿ ಜಿನೇಂದ್ರ ಕಣಗಾವಿ, ಎಸ್‌ಪಿಗೆ ನೀಡಲಾಗಿದ್ದ ಶೋಕಾಸ್ ನೋಟಿಸ್‌ಗೂ ಉತ್ತರ ಪಡೆದಿದ್ದಾರೆ.ವಾರದೊಳಗೆ ಜೈಲಿನಲ್ಲಿನ ಅಕ್ರಮಗಳ ಕುರಿತು ವರದಿ ನೀಡುವಂತೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ. ಇನ್ನುಳಿದ ಮೂರು ದಿನಗಳಲ್ಲಿ ಜೈಲು ಡಿಐಜಿ ಅವರ ಹೇಳಿಕೆ ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ಜಿನೇಂದ್ರ ಕಣಗಾವಿ ಸಂಗ್ರಹಿಸಲಿದ್ದಾರೆ.


ಸಾಕ್ಷ್ಯ ಸಂಗ್ರಹ ಹಾಗೂ ವಿಚಾರಣೆ ಪೂರ್ಣಗೊಂಡ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅಕ್ರಮಗಳ ಕುರಿತು ಡಿಜಿಪಿಗೆ ಅಂತಿಮ ವರದಿ ಸಲ್ಲಿಸಲು ಡಿಐಜಿ ಜಿನೇಂದ್ರ ಕಣಗಾವಿ ಸಿದ್ಧತೆ ನಡೆಸಿದ್ದಾರೆ.

Related Articles

TRENDING ARTICLES