ಮಕ್ಕಳಿಗೆ ಪೊಲೀಸರಿಂದ ಜಾಗೃತಿ: ಶಿಕ್ಷಣ, ಮಾದಕವಸ್ತುಗಳ ಕುರಿತು ಅರಿವು

ಶಿವಮೊಗ್ಗ ನಗರದ ಸೂಳೆಬೈಲು ಪ್ರದೇಶದಲ್ಲಿ ಶಾಲಾ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಮಕ್ಕಳೊಂದಿಗೆ ಸಂವಾದ ನಡೆಸಿ, ಶಿಕ್ಷಣದ ಮಹತ್ವ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ವಿದ್ಯಾಭ್ಯಾಸದ ಪಾತ್ರದ ಬಗ್ಗೆ ತಿಳಿಸಲಾಯಿತು.

ಇದೇ ವೇಳೆ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು, ವಿದ್ಯಾರ್ಥಿಗಳ ಜೀವನದ ಮೇಲೆ ಬೀರುವ ನಕಾರಾತ್ಮಕ ಪರಿಣಾಮಗಳು ಹಾಗೂ ಮಾದಕ ವ್ಯಸನದಿಂದ ದೂರವಿರುವ ಅಗತ್ಯತೆ ಕುರಿತು ಮಕ್ಕಳಿಗೆ ಅರಿವು ಮೂಡಿಸಲಾಯಿತು.

ಮಕ್ಕಳು ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಿ, ಮಾದಕ ವಸ್ತುಗಳಿಂದ ದೂರವಿದ್ದು, ಆರೋಗ್ಯಕರ ಹಾಗೂ ಸುರಕ್ಷಿತ ಜೀವನ ನಡೆಸುವಂತೆ ಜಾಗೃತಿ ಮೂಡಿಸಲಾಯಿತು.

Related Articles

TRENDING ARTICLES