ಚಾಮರಾಜನಗರ: ದಿನಾಂಕ:11-08-2025 ರಂದು ಯಳಂದೂರು ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿರವರು ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು, ಸೈಬರ್ ಅಪರಾಧಗಳು, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಪಾಲನೆ ಹಾಗೂ ಸೈಬರ್ ಕ್ರೈಂ ಸಹಾಯವಾಣಿ 1930 ಮತ್ತು ERSS 112 ನ ಬಗ್ಗೆ ಅರಿವು ಮೂಡಿಸಿರುತ್ತಾರೆ.
ಶಿವಮೊಗ್ಗ: “ಮನೆ ಮನೆಗೆ ಪೊಲಿಸ್” ಭೇಟಿ ಕರ್ತವ್ಯದ ವೇಳೆ ಪೋಷಕತ್ವದಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಅವರಿಗೆ ಆಶ್ರಯ ಕಲ್ಪಿಸಲು ಶ್ರಮವಹಿಸಿ, ಉತ್ತಮ ಕರ್ತವ್ಯ ಮಾಡಿದ ಹೊಳೆಹೊನ್ನೂರು ಪೊಲೀಸ್ ಠಾಣಾ ಸಿಬ್ಬಂಧಿಯವರಾದ ಶ್ರೀ ಆನಂದ ಹೆಚ್.ವಿ ಸಿಹೆಚ್ಸಿ ರವರಿಗೆ ಸನ್ಮಾನ.
ರಾಜ್ಯ ಸರ್ಕಾರದ ನೂತನ ಯೋಜನೆ ಮನೆ ಮನೆ ಪೊಲೀಸ್ ಭೇಟಿ ಯೋಜನೆಯನ್ವಯ ಶ್ರೀ ಮಿಥುನ್ ಕುಮಾರ್ ಜಿ ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ರವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ.
ಆ ನಿಟ್ಟಿನಲ್ಲಿ ದಿನಾಂಕ 04/08/2025 ರಂದು ಭದ್ರಾವತಿ ಉಪ ವಿಭಾಗ ಹೊಳೆಹೊನ್ನೂರು ಪೊಲೀಸ್ ಠಾಣಾ ಸಿ.ಹೆಚ್.ಸಿ ರವರಾದ ಶ್ರೀ ಆನಂದ ಹೆಚ್.ವಿ ರವರು ಠಾಣಾ ವ್ಯಾಪ್ತಿಯ ಮುಸ್ಲಿಂ ಕ್ಯಾಂಪ್ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದಾಗ ಪೋಷಕರಿಬ್ಬರೂ ಮೃತಪಟ್ಟ 09 ವರ್ಷ ಹಾಗೂ 03 ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಪೋಷಕತ್ವದಿಂದ ವಂಚಿತರಾಗಿರುವುದು ಕಂಡು ಬಂದಿರುತ್ತದೆ. ಅವರಿಗೆ ಆಶ್ರಯ ಕಲ್ಪಿಸುವ ಸಂಬಂಧ ಭದ್ರಾವತಿಯ ಡಾನ್ ಬೋಸ್ಕೋ ಸಂಸ್ಥೆ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗರವರನ್ನು ಸಂಪರ್ಕಿಸಿ, ಇಬ್ಬರೂ ಪುಟ್ಟ ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಡುವುದರ ಉತ್ತಮ ಕರ್ತವ್ಯ ಮಾಡಿ, ಘನ ರಾಜ್ಯ ಸರ್ಕಾರದ ಮನೆ ಮನೆ ಪೊಲೀಸ್ ಯೋಜನೆಯ ಉದ್ದೇಶವನ್ನು ಕಾರ್ಯಗತಗೊಳಿಸಿರುತ್ತಾರೆ.
ಶ್ರೀ ಆನಂದ ಹೆಚ್.ವಿ ರವರ ಈ ಉತ್ತಮ ಕರ್ತವ್ಯಕ್ಕಾಗಿ ದಿನಾಂಕಃ 11-08-೨೦೨೫ ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ, ಶ್ರೀ ಆನಂದ ಹೆಚ್.ವಿ ರವರಿಗೆ ಪ್ರಶಂಸನಾ ಪತ್ರವನ್ನು ನೀಡಿ ರವಿಸಲಾಯಿತು.
ಉಡುಪಿ: ಶಂಕರನಾರಾಯಣ ಠಾಣಾ ವ್ಯಾಪ್ತಿಯ ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಪದವಿ ಕೇಂದ್ರ ಇಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮತ್ತು ಅದರ ಬಗ್ಗೆ ಮಾಹಿತಿ ಗಳ ಬಗ್ಗೆ ಸದ್ರಿ ಕಾಲೇಜು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಲಾಯಿತು. ಹಾಗೂ ಕಾಲೇಜು ಪರಿಸರದಲ್ಲಿ ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟ ಇದರ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಕಾಲೇಜು ಹಂತದಲ್ಲಿ ಹೊಸದಾಗಿ ಆಗಿರುವ ಡ್ರಗ್ಸ್ ಕಮಿಟಿ ಇದರ ಬಗ್ಗೆ ತಿಳಿಸಲಾಯಿತು. ಸಂಚಾರ ನಿಯಮ ಹಾಗೂ 112 ಸಹಾಯವಾಣಿ, ಸೈಬರ್ ಅಪರಾದ ಹಾಗೂ 1930 ತುರ್ತು ಕರೆ ಇದರ ಬಗ್ಗೆ ವಿವರವಾಗಿ ತಿಳಿಸಲಾಯಿತು.
“ಮನೆ-ಮನೆಗೆ ಪೊಲೀಸ್” ಎಂಬ ಪರಿಕಲ್ಪನೆಯಡಿ ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ,ಸೈಬರ್ ಅಪರಾಧ,ಬಾಲ್ಯ ವಿವಾಹದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಗದಗ: ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣವನ್ನು ಡಿಎಸ್ಪಿ ಗದಗ ರವರ ನೇತೃತ್ವದ ತಂಡ ಯಶಸ್ವಿಯಾಗಿ ಭೇದಿಸಿ, ಇಬ್ಬರು ಆರೋಪಿತರನ್ನು ಬಂಧಿಸಿದೆ. ಆರೋಪಿತರಿಂದ ₹4,17,942 ಮೌಲ್ಯದ ನಟ್-ಬೋಲ್ಟ್,ಡೈ ಹಾಗೂ ಸ್ಕ್ರೂ ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಆಟೋ-ರಿಕ್ಷಾಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದೆ. ಈ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿರವರ ಕಾರ್ಯಕ್ಷಮತೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರೋಹನ್ ಜಗದೀಶ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ.
ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಎಸ್.ಸಿ/ಎಸ್.ಟಿ ಸಮುದಾಯದವರ ಸಭೆ ನಡೆಸಲಾಯಿತು. ಈ ಸಂಧರ್ಭದಲ್ಲಿ ಅವರ ಕುಂದು ಕೊರತೆಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರ ಕೈಗೊಳ್ಳುವ ಬಗ್ಗೆ ಭರವಸೆ ನೀಡಲಾಯಿತು. ಇದೇ ಸಂಧರ್ಭದಲ್ಲಿ ಮನೆ-ಮನೆಗೆ ಪೊಲೀಸ್ ಪರಿಕಲ್ಪನೆ ಕುರಿತು ಅರಿವು ಮೂಡಿಸಲಾಯಿತು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಕಾರವಾರ ಗ್ರಾಮೀಣ ಹಾಗೂ ಶಿರಸಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಉದ್ದೇಶದ ಬಗ್ಗೆ ತಿಳಿಸಿ, ಜಾಗೃತಿ ಮೂಡಿಸಲಾಯಿತು.
ಮಾನ್ಯ ಪೊಲೀಸ್ ಅಧೀಕ್ಷಕರು ನಿನ್ನೆ ರಾತ್ರಿ ಹಿರಿಯೂರು & ಐಮಂಗಲ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ನೈಟ್ ರೌಂಡ್ಸ್ ನ್ನು ಕೈಗೊಂಡು ರಾತ್ರಿ ಕರ್ತವ್ಯದಲ್ಲಿದ್ದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಹಾಗೂ ಐಮಂಗಲ & ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಗಳಿಗೆ ಮತ್ತು ಚೆಕ್ ಪೊಸ್ಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಾಮರಾಜನಗರ: “ಮನೆ ಮನೆಗೆ ಪೊಲೀಸ್” ಎಂಬ ವಿನೂತನ ಕಾರ್ಯಕ್ರಮದ ಅಂಗವಾಗಿ ದಿ:10-08-2025 ರಂದು ಹನೂರು, ಬೇಗೂರು ಹಾಗೂ ಗುಂಡ್ಲುಪೇಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಸುರಕ್ಷತೆ, ಭದ್ರತೆ, ಕಾನೂನು ಸುವ್ಯವಸ್ಥೆ, ಅಪರಾಧ ತಡೆ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಸಾರ್ವಜನಿಕರಿಂದ ಇಲಾಖೆಗೆ ಸಂಬಂಧಿಸಿದ ಅಹವಾಲು ಮತ್ತು ಸಲಹೆಗಳ ಕುರಿತು ಚರ್ಚಿಸಲಾಯಿತು.