ಸಿಕ್ಕದ ಐಫೋನ್‌ನನ್ನ ಪೊಲೀಸರಿಗೆ ಒಪ್ಪಿಸಿದ ವ್ಯಕ್ತಿ ಪ್ರಾಮಾಣಿಕತೆಗೆ ಶಹಬ್ಬಾಸ್!

0

ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ವ್ಯಕ್ತಿಯೊಬ್ಬರು ಪ್ರಾಮಾಣಿಕತೆ ಮೆರೆದು ಸಮಾಜಕ್ಕೆ ಮಾದರಿಯಾಗಿದ್ದಾರೆ. ದಾರಿಯಲ್ಲಿ ಸಿಕ್ಕ ದುಬಾರಿ ಬೆಲೆಯ ಐಫೋನ್ ಅನ್ನು ತಮ್ಮ ಬಳಿ ಇಟ್ಟುಕೊಳ್ಳದೇ ನೇರವಾಗಿ ಪೊಲೀಸರಿಗೆ ಒಪ್ಪಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚಿಂಚೋಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಿವಲಿಂಗಪ್ಪ ಎಂಬುವರಿಗೆ ದಾರಿಯಲ್ಲಿ ಐಫೋನ್ ಮೊಬೈಲ್ ಸಿಕ್ಕಿತ್ತು. ಆದರೆ ಅದನ್ನು ತಮ್ಮ ಬಳಿ ಇಟ್ಟುಕೊಳ್ಳದೆ, ನೇರವಾಗಿ ಚಿಂಚೋಳಿ ಪೊಲೀಸ್ ಠಾಣೆಗೆ ತಂದು ಪೊಲೀಸರಿಗೆ ಹಸ್ತಾಂತರಿಸಿದರು.

ಮೊಬೈಲ್ ಸ್ವೀಕರಿಸಿದ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ, ಅದರ ನೈಜ ಮಾಲೀಕರನ್ನು ಪತ್ತೆಹಚ್ಚುವ ಕಾರ್ಯ ಆರಂಭಿಸಿದ್ದಾರೆ. ಕಳೆದುಹೋದ ಮೊಬೈಲ್ ಅನ್ನು ಸುರಕ್ಷಿತವಾಗಿ ವಾರಸುದಾರರಿಗೆ ತಲುಪಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

ಶಿವಲಿಂಗಪ್ಪ ಅವರ ಪ್ರಾಮಾಣಿಕ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಚಿಂಚೋಳಿ ಪೊಲೀಸ್ ಠಾಣೆಯ ಅಧಿಕಾರಿಗಳು, ಅವರನ್ನು ಅಭಿನಂದಿಸಿ ಗೌರವಿಸಿದರು. ಅವರ ಕಾರ್ಯವು ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದು, ಸಾರ್ವಜನಿಕ ವಲಯದಲ್ಲಿಯೂ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ಕಳೆದುಹೋದ ವಸ್ತುಗಳು ಸಿಕ್ಕಲ್ಲಿ ಅವುಗಳನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸುವ ಮೂಲಕ ನೈಜ ಮಾಲೀಕರಿಗೆ ತಲುಪಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ಪ್ರಾಮಾಣಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ಉತ್ತಮ ಉದಾಹರಣೆಯಾಗಿ ಶಿವಲಿಂಗಪ್ಪ ಅವರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.

ಸಕಲೇಶಪುರದಲ್ಲಿ ₹2.5 ಲಕ್ಷ ಮೌಲ್ಯದ ಎಂಡಿಎಂಎ ಜಪ್ತಿ, ಕೊಡಗು ಮೂಲದ ವ್ಯಕ್ತಿ ಬಂಧನ

0

ಸಕಲೇಶಪುರ, ಆ.6: ನಗರದಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸಕಲೇಶಪುರ ನಗರ ಠಾಣೆ ಪೊಲೀಸರು ಬಂಧಿಸಿ, ಆತನಿಂದ ಸುಮಾರು ₹2.5 ಲಕ್ಷ ಮೌಲ್ಯದ 25 ಗ್ರಾಂ ಎಂಡಿಎಂಎ (MDMA) ಮಾದಕ ವಸ್ತು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.ಬಂಧಿತ ಆರೋಪಿಯನ್ನು ಕೊಡಗು ಮೂಲದ ಅಜರುದ್ದೀನ್ ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆಗಸ್ಟ್ 5ರಂದು ಮಧ್ಯಾಹ್ನ ಸುಮಾರು 2.15ರ ವೇಳೆಗೆ ಸಕಲೇಶಪುರ ಪಟ್ಟಣದ ಗುರುದೇವ ಪೆಟ್ರೋಲ್ ಬಂಕ್ ಸಮೀಪದ ನಾಗ್ ಎನ್‌ಕ್ಲೇವ್ ಲೇಔಟ್ ಪ್ರದೇಶದಲ್ಲಿ ಕಾರಿನಲ್ಲೇ ಮಾದಕ ವಸ್ತು ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಸಕಲೇಶಪುರ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ ಕೆ.ಎಸ್. ಅವರಿಗೆ ಲಭ್ಯವಾಗಿತ್ತು.

ಮಾಹಿತಿಯ ಆಧಾರದ ಮೇಲೆ ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ ಸ್ಥಳದ ಮೇಲೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿತು. ಪರಿಶೀಲನೆ ವೇಳೆ ಆತನ ಬಳಿ ಇದ್ದ 25 ಗ್ರಾಂ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದ್ದು, ಅದನ್ನು ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಯಶಸ್ವಿ ಕಾರ್ಯಾಚರಣೆಯು ಸಕಲೇಶಪುರ ನಗರ ಪೊಲೀಸ್ ಇನ್ಸ್‌ಪೆಕ್ಟರ್ ವನರಾಜು ಅವರ ಮಾರ್ಗದರ್ಶನದಲ್ಲಿ, ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ ಕೆ.ಎಸ್. ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಖಾದರ್ ಅಲಿ, ರೇವಣ್ಣ ಎಸ್.ಜೆ., ಶ್ರೀಧರ್, ರಾಕೇಶ್, ಸೋಮಶೇಖರ್, ಅಶೋಕ್, ಸುನಿಲ್ ಕುಮಾರ್, ಹನುಮಂತು, ಶಿವಕುಮಾರ್ ಹಾಗೂ ಚಾಲಕ ಮಧು ಭಾಗವಹಿಸಿದ್ದರು.

ಬಾಲಕಿಗೆ ನಕಲಿ ಪಿಸ್ತೂಲ್ ತೋರಿಸಿ ಮನೆ ದರೋಡೆ ಮಾಡಿದ್ದವರನ್ನು ಬಂಧಿಸಿದ ಜೆ ಜೆ ನಗರ ಪೊಲೀಸರು…!

0

ಮನೆಯಲ್ಲಿ ಒಂಟಿಯಾಗಿದ್ದ ಬಾಲಕಿಗೆ ನಕಲಿ ಪಿಸ್ತೂಲು ತೋರಿಸಿ ಹಾಗೂ ಹಲ್ಲೆ ಮಾಡಿ, ಬೆದರಿಸಿ ಮನೆಯಲ್ಲಿದ್ದ ನಗದು, ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದ ಇಬ್ಬರು ದರೋಡೆಕೋರರನ್ನು ಜೆಜೆ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ಧಾರೆ.
ಚಾಮರಾಜಪೇಟೆ ನಿವಾಸಿ ಅಪ್ಸರ್ ಮತ್ತು ಪಾದರಾಯನಪುರದ ನಿವಾಸಿ ಅಬ್ಬಲ್ ಬಂಧಿತ ಆರೋಪಿಗಳಾಗಿದ್ದು, ಪಾದರಾಯನಪುರದ 7ನೇ ಕ್ರಾಸ್ನಲ್ಲಿರುವ ಕಟ್ಟಡವೊಂದರ 4ನೇ ಹಂತದ ಮಹಡಿಯಲ್ಲಿ ತಾಯಿ-ಮಗಳು ಇಬ್ಬರೇ ವಾಸವಾಗಿದ್ದು, ಕೆಲಸದ ನಿಮಿತ್ತ ತಾಯಿ ಹೊರಹೋಗಿದ್ದು, ಮನೆಯಲ್ಲಿ ಅವರ ಮಗಳು ಒಬ್ಬರೇ ಇರುವುದನ್ನು ಖಚಿತ ಪಡಿಸಿಕೊಂಡು, ಹಾಡುಹಗಲೇ ಇವರ ಮನೆಗೆ ನುಗ್ಗಿ, ನಕಲಿ ಪಿಸ್ತೂಲು ತೋರಿಸಿ ಅದರಿಂದ ಬಾಲಕಿಯ ತಲೆಗೆ ಹೊಡೆದು ಗಾಯಗೊಳಿಸಿ ಚಾಕುವಿನಿಂದ ಬೆದರಿಸಿ ಕೊಠಡಿಯ ಬೀರುವಿನಲ್ಲಿದ್ದ ಚಿನ್ನಾಭರಣ, ನಗದು ಎಲ್ಲವನ್ನೂ ದೋಚಿಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ಬಾಲಕಿಯ ತಾಯಿ ಜೆ ಜೆ ನಗರ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡುತ್ತಾರೆ, ದರೋಡೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸ್ ಇನ್ಸ್ಪೆಕ್ಟರ್ ಕಾಂತರಾಜ್ ಅವರು, ಸಿಬ್ಬಂಧಿಗಳನ್ನು ತನಿಖೆಗೆ ಇಳಿಸಿ ದರೋಡೆಕೋರರಿಗಾಗಿ ಬಲೆ ಬೀಸುತ್ತಾರೆ. ಕಾರ್ಯಾಚರಣೆ ಕೈಗೊಂಡ ಪೊಲೀಸರು ಹಳೇಗುಡ್ಡದಹಳ್ಳಿ ಸಮೀಪ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಇಬ್ಬರು ದರೋಡೆಕೋರರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ, ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದಾಗಿ ಬಾಯಿಬಿಟ್ಟಿದ್ದಾರೆ.
ಬಂಧಿತ ಆರೋಪಿಗಳಿಂದ 25ಲಕ್ಷದ 50 ಸಾವಿರ ರೂಪಾಯಿ ಮೌಲ್ಯದ 139 ಗ್ರಾಂ ಚಿನ್ನಾಭರಣ, 8 ಲಕ್ಷರೂಪಾಯಿ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನವನ್ನು ಜೆ ಜೆ ನಗರ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ಐಪಿಎಸ್ ಅವರ ನಿರ್ದೇಶನದಂತೆ, ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ಉದಯ್ ಭಾಸ್ಕರ್ ಅವರ ಮಾರ್ಗದರ್ಶನದಲ್ಲಿ, ಜೆಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕಾಂತರಾಜು ಅವರ ನೇತೃತ್ವದಲ್ಲಿ, ಪಿಎಸ್ಐಗಳಾದ ಚೋಳಪ್ಪ, ಪದ್ಮನಾಭ, ಎಎಸ್ಐ ಕುಮಾರ್, ಸಿಬ್ಬಂದಿಗಳಾದ ದಾದಾಪೀರ್, ಮನೋಜ್ ಕುಮಾರ್, ಕರೀಂಸಾಬ್ ನದಾಫ್, ಹಣಮಂತ. ಚಂದ್ರಪ್ಪ, ಸಂಜೀವ್, ಈರಪ್ಪ, ಪ್ರದೀಪ್ ಅವರುಗಳ ತಂಡ ದರೋಡೆಕೋರರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲ್ಯಾಣ ಮಂಟಪಗಳಲ್ಲಿ ಕಳವು ಮಾಡುತ್ತಿದ್ದವನನ್ನು ಬಂಧಿಸಿದ ಆವಲಹಳ್ಳಿ ಪೊಲೀಸರು..!

0

BENGALURU: ಮದುವೆ ಮನೆಗಳನ್ನೇ ಗುರಿಯಾಗಿಸಿಕೊಂಡು, ಕಲ್ಯಾಣ ಮಂಟಪಗಳಲ್ಲಿ ಕಳವು ಮಾಡುತ್ತಿದ್ದ ಖದೀಮನನ್ನು, ಮದುವೆ ಸಂಭ್ರಮದಲ್ಲಿದ್ದ ಸಂಬಂಧಿಕರರೇ ಆವಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.
ಕಾಟಂನಲ್ಲೂರು ಕ್ರಾಸ್ ಬಳಿಯ ಮದುವೆ ಕಲ್ಯಾಣ ಮಂಟಪಕ್ಕೆ ಸಂಬಂಧಿಕರ ಮದುವೆಗೆ ದೂರುದಾರರು ಹೋಗಿದ್ದರು. ಅಪರಿಚಿತ ವ್ಯಕ್ತಿಯೊಬ್ಬ ಕಲ್ಯಾಣ ಮಂಟಪದ ಮೊದಲನೇ ಮಹಡಿಯ ಕೊಠಡಿಯ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಕಂಡು ಆತನನ್ನು ಹಿಡಿದು ಆವಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದರು.
ಬಳಿಕ ಆವಲಹಳ್ಳಿಯ ಗೊರವಿಗೆರೆಯ ನಿವಾಸಿ 41 ವರ್ಷದ ಆಸೀಪ್ನನ್ನು ವಶಕ್ಕೆ ಪಡೆದುಕೊಂಡ ಆವಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಅವರು ವಿಚಾರಣೆಗೆ ಒಳಪಡಿಸಿದಾಗ, ದುಶ್ಚಟ ಹಾಗೂ ಸಾಲ ತೀರಿಸಲು ಹಣಕ್ಕಾಗಿ ಕಲ್ಯಾಣ ಮಂಟಪಗಳಲ್ಲಿ ಕಳವು ಮಾಡುತ್ತಿದ್ದುದಾಗಿ, ಕದ್ದ ಚಿನ್ನಾಭರಣಗಳನ್ನು ಜ್ಯೂವೆಲರಿ ಅಂಗಡಿಯಲ್ಲಿ ಅಡಮಾನವಿಟ್ಟಿದ್ದ, ಈತನ ಮಾಹಿತಿ ಮೇರೆಗೆ 47 ಲಕ್ಷ ರೂಪಾಯಿ ಮೌಲ್ಯದ 340 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ಆವಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲು ಅಡಾವತ್ ಐಪಿಎಸ್ ಅವರ ನಿರ್ದೇಶನದಂತೆ, ವೈಟ್ಫೀಲ್ಡ್ ಉಪ ವಿಭಾಗದ ಎಸಿಪಿ ರೀನಾ ಸುವರ್ಣ ಅವರ ಮಾರ್ಗದರ್ಶನದಲ್ಲಿ, ಆವಲಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ್ ಬಿ ಆರ್ ಅವರ ನೇತೃತ್ವದಲ್ಲಿ ಪಿಎಸ್ಐಗಳಾದ ರೇವಣಸಿದ್ದಪ್ಪ ಜಿ ಜೀರಂಕಾಳಗಿ, ನವೀದ್, ಎಎಸ್ಐ ಪ್ರಭಾಕರ್, ಸಿಬ್ಬಂದಿಗಳಾದ ದೇವೆಂದ್ರ ನಾಯಕ, ಜಟ್ಟಿಂಗರಾಯ, ಮಣಿ, ಹರೀಶ್, ಕಿರಣ್, ನಾಗರಾಜ್, ಫಿರೋಜ್ಅಹಮದ್, ನಾಗೇಶ್, ಮಂಜುನಾಥ, ಶರಣಪ್ಪ ಹರಿ ಅವರುಗಳ ತಂಡ ಕುಖ್ಯಾತ ಮನೆಗಳ್ಳನನ್ನು ಹಾಗೂ ರಿಸಿವರ್ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ: 5 ವರ್ಷಗಳ ‘Cooling period’ ಜಾರಿ

0

ಪೊಲೀಸ್ ಇಲಾಖೆಯಲ್ಲಿ ಪ್ರಭಾವಿ ಹುದ್ದೆಗಳಿಗಾಗಿ ನಡೆಯುವ ರಾಜಕೀಯ ಶಿಫಾರಸು ಹಾಗೂ ಲಾಬಿಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
Police Inspector ಮತ್ತು DySP ಹುದ್ದೆಗಳ ವರ್ಗಾವಣೆ ನಿಯಮಾವಳಿಗಳನ್ನು ಗೃಹ ಇಲಾಖೆ ಪರಿಷ್ಕರಿಸಿದ್ದು, ಕಡ್ಡಾಯ ಐದು ವರ್ಷಗಳ ಕೂಲಿಂಗ್-ಆಫ್ ಅವಧಿ ನಿಯಮವನ್ನು ಜಾರಿಗೆ ತಂದಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ಬಡ್ತಿ ಪಡೆದ ಡಿವೈಎಸ್ಪಿಗಳು Executive Duty ಹುದ್ದೆಗೆ ಅರ್ಹರಾಗಲು ಮೊದಲು Non Executive Duty ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸಿರಬೇಕು.
ಇದೇ ರೀತಿ, ಬಡ್ತಿ ಪಡೆದ ಪೊಲೀಸ್ ಇನ್ಸ್ಪೆಕ್ಟರ್ಗಳು ಕೂಡ Non Executive Duty ಜವಾಬ್ದಾರಿಗಳಲ್ಲಿ ಎರಡು ವರ್ಷ ಹಾಗೂ ಪೂರ್ಣಗೊಳಿಸಿದ ಬಳಿಕವೇ Executive Duty ಹುದ್ದೆಗೆ ನೇಮಕವಾಗಲು ಅರ್ಹರಾಗುತ್ತಾರೆ.
ಇದರ ಜೊತೆಗೆ, ಬಡ್ತಿ ಪಡೆದ ಅಧಿಕಾರಿಗಳು ಎರಡು ವರ್ಷದೊಳಗೆ ನಾಲ್ಕು ವಾರಗಳ Refresher Training ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ತರಬೇತಿಯನ್ನು ಪೂರ್ಣಗೊಳಿಸದ ಅಧಿಕಾರಿಗಳಿಗೆ ಕಾರ್ಯನಿರ್ವಾಹಕ ಹುದ್ದೆ ನೀಡುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಅಂತರ ಘಟಕ ವರ್ಗಾವಣೆಗಳಿಗೂ ಸರ್ಕಾರ ಹೊಸ ನಿಯಮಗಳನ್ನು ಸಹ ಜಾರಿಗೆ ತಂದಿದೆ. ಪ್ರಮುಖ ಬದಲಾವಣೆಯೆಂದರೆ ಐದು ವರ್ಷದ ‘ಕೂಲಿಂಗ್ ಪಿರಿಯಡ್’.
ಬೆಂಗಳೂರು ನಗರ, ಮೈಸೂರು ನಗರ, ಹುಬ್ಬಳ್ಳಿ-ಧಾರವಾಡ ನಗರ, ಬೆಳಗಾವಿ ನಗರ, ಕಲಬುರಗಿ ನಗರ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಸತತ ಐದು ವರ್ಷ ಸೇವೆ ಸಲ್ಲಿಸಿದ ಅಧಿಕಾರಿಗಳನ್ನು ಅದೇ ಆಯುಕ್ತರ ವ್ಯಾಪ್ತಿಗೆ ಮರು ನೇಮಕ ಮಾಡುವುದಿಲ್ಲ. ಅವರು ಬೇರೆ ಘಟಕದಲ್ಲಿ ಐದು ವರ್ಷದ ‘ಕೂಲಿಂಗ್ ಪಿರಿಯಡ್’ ಪೂರ್ಣಗೊಳಿಸಿದ ಬಳಿಕವೇ ಅದೇ ಘಟಕಕ್ಕೆ ಮರು ವರ್ಗಾವಣೆಗೆ ಅರ್ಹರಾಗುತ್ತಾರೆ. ಆದರೆ, ವಿಶೇಷ ಸಂದರ್ಭಗಳಲ್ಲಿ ಸಂಬಂಧಿತ ಪ್ರಾಧಿಕಾರದ ಅನುಮತಿಯೊಂದಿಗೆ ಈ ನಿಯಮವನ್ನು ಸಡಿಲಿಸಬಹುದಾಗಿದೆ.


ಪರಿಷ್ಕೃತ ಮಾರ್ಗಸೂಚಿಯಲ್ಲಿ ರೈಲ್ವೆ ಪೊಲೀಸ್, ಸೈಬರ್ ಪೊಲೀಸ್ ಹಾಗೂ ಮಹಿಳಾ ಪೊಲೀಸ್ ಘಟಕಗಳನ್ನು ಕಾರ್ಯನಿರ್ವಾಹಕ ವಿಭಾಗದ ವ್ಯಾಪ್ತಿಗೆ ಸೇರಿಸಲಾಗಿದೆ.
ಮತ್ತೊಂದೆಡೆ ಪ್ರಮುಖ ಇಲಾಖಾ ವಿಚಾರಣೆಗಳು, ಲೋಕಾಯುಕ್ತ ಪ್ರಕರಣ, ಕ್ರಿಮಿನಲ್ ತನಿಖೆ ಎದುರಿಸುತ್ತಿರುವ ಅಥವಾ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಬೋರ್ಡ್ನಿಂದ ಅನರ್ಹರೆಂದು ಘೋಷಿಸಲ್ಪಟ್ಟಿರುವ ಡಿವೈಎಸ್ಪಿ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ಗಳಿಗೆ ಕಾರ್ಯನಿರ್ವಾಹಕ ಹುದ್ದೆ ನೀಡಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಈ ಹೊಸ ಮಾರ್ಗಸೂಚಿಗಳು ಪೊಲೀಸ್ ಇಲಾಖೆಯಲ್ಲಿ ಪಾರದರ್ಶಕತೆ, ಸಮತೋಲನ ಹಾಗೂ ಆಡಳಿತಾತ್ಮಕ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಇಬ್ಬರ ಬೈಕ್ ಖಧೀಮರನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಬೈಕ್‌ ವಶ

0


ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಎಸ್.ಪಿ.ಸುನಿಲ್ ರವರ ಆದೇಶದಂತೆ ಅಪರಾದ ವಿಭಾಗದ ಪಿ.ಎಸ್.ಐ ರವರಾದ ಕೆ.ಎ.ಚಂದ್ರ ಹಾಗೂ ಸಿಬ್ಬಂದಿಗಳಾದ ಎ.ಆರ್.ಎಸ್.ಐ ಸಂಜಯ್ ಹೆಚ್.ಸಿ-151 ನಾರಾಯಣ, ಹೆಚ್.ಜಿ ರೆಹಮಾನ್ ಉರ್ ಅಜೀಜ್ ರವರುಗಳು ದಿನಾಂಕಃ 07.07.2026 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಕಡಕೊಳ ಉಪಪೊಲೀಸ್ ಠಾಣೆಯ ಮುಂಭಾಗ ವಾಹನಗಳ ತಪಾಸಣೆ ಕೈಗೊಳ್ಳುತ್ತಿರುವಾಗ ನಂಬರ್ ಪ್ಲೇಟ್ ಇಲ್ಲದ ಒಂದು ಹೀರೋ ಸ್ಲೆಂಡರ್ ಬೈಕ್‌ನಲ್ಲಿ ಇಬ್ಬರೂ ಆಸಾಮಿಗಳು ಬರುತ್ತಿದ್ದು ಸದರಿ ವಾಹನವನ್ನು ನಿಲ್ಲಿಸಿ ವಿಚಾರಣೆ ಮಾಡಲಾಗಿ ಸದರಿ ವಾಹನವನ್ನು ಕಳ್ಳತನ ಮಾಡಿರುವುದಾಗಿ ಹಾಗೂ ಇನ್ನೂ ಕೆಲವು ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ತಿಳಿದು ಬಂದ ಮೇರೆಗೆ ಠಾಣೆಯಲ್ಲಿ ಮೊ.ಸಂ 248/2026 ಕಲಂ 303(2) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

1) ನವಾಜ್ ಖಾನ್ @ ಸೂಪಿ ಬಿನ್ ಅಮ್ಜದ್ ಖಾನ್, 25 ವರ್ಷ, ಮುಸ್ಲಿಂ ಜನಾಂಗ, ವೆಲ್ಡಿಂಗ್ ಕೆಲಸ, # 174, 3 ನೇ ಕ್ರಾಸ್, ಮಹದೇವಪುರ, ಮೈನ್ ರೋಡ್, ಶಾಂತಿನಗರ, ಸೊಸೈಟಿ ಪಕ್ಕ, ಮೈಸೂರು,
2) ಮಹಮ್ಮದ್ ಫರಾನ್ ಬಿನ್ ಇಲಿಯಾಜ್ ಅಹಮದ್, 22 ವರ್ಷ, ಮುಸ್ಲಿಂ ಜನಾಂಗ, ಕಡ್ಲೆ ಬೀಜ ವ್ಯಾಪಾರ, ಮೀನಾಬಜಾರ್ ಹತ್ತಿರ, ಮನೆ ನಂ 847, 13 ನೇ ಕ್ರಾಸ್, ಉಸ್ಮಾನಿಯಾ ಸಿ ಬ್ಲಾಕ್ ಬೀಡಿ ಕಾಲೋನಿ, ಮೈಸೂರು
ಇಬ್ಬರು ಕಳ್ಳರಿಂದ ವಶಪಡಿಸಿಕೊಂಡ ದ್ವಿಚಕ್ರವಾಹನಗಳ ವಿವರ
1)ಏಂ-11 ಇW-4219, ಪ್ಯಾಶನ್ ಪ್ರೊ ಬೈಕ್,
2)ಏಂ-02, ಊಓ-672 ಬಜಾಜ್ ಡಿಸ್ಕವರಿ ಬೈಕ್,
3)ಏಂ-45 W-9984 ಟಿವಿಎಸ್ ಅಪ್ಪಾಚಿ ಖಖಿಖ ಬೈಕ್
4)ಏಂ-55. W-5470 ಹೋಂಡಾ ಆಕ್ಟೀವಾ ಸ್ಕೂಟರ್
5) ನಂಬರ್ ಪ್ಲೇಟ್ ಇಲ್ಲದ ಸುಜುಕಿ ಆಕ್ಸಿಸ್ ಸ್ಕೂಟರ್
6)ಏಂ-01 ಇಘಿ-5304 ಹೋಂಡಾ ಆಕ್ಟೀವಾ ಸ್ಕೂಟರ್,
7) ನಂಬರ್ ಪ್ಲೇಟ್ ಇಲ್ಲದ ಹೀರೋ ಸ್ಲೆಂಡರ್ ಬೈಕ್,
8) ನಂಬರ್ ಪ್ಲೇಟ್ ಇಲ್ಲದ ಸುಜುಕಿ ಆಕ್ಸಿಸ್ ಸ್ಕೂಟರ್,
9) ನಂಬರ್ ಪ್ಲೇಟ್ ಇಲ್ಲದ ಮ್ಯಾಸ್ಟ್ರೋ ಬೈಕ್,

ಅಮಾನತ್ತು ಪಡಿಸಿಕೊಂಡ 09 ಬೈಕ್‌ಗಳ ಒಟ್ಟು ಮೌಲ್ಯ ಸುಮಾರು 3,90,000/- ರೂಪಾಯಿಗಳಾಗಿರುತ್ತದೆ.
ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್, ಅಪರ ಪೊಲೀಸ್ ಅಧೀಕ್ಷಕರಾದ ಮಲ್ಲಿಕ್, ಹಾಗೂ ನಾಗೇಶ್ ಎಲ್. ಮೈಸೂರು ಗ್ರಾಮಾಂತರ ಉಪ-ವಿಭಾಗದ ಉಪಾದೀಕ್ಷಕರಾದ ರಾಜಣ್ಣ, ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ನಿರೀಕ್ಷಕರಾದ ಎಸ್.ಪಿ. ಸುನಿಲ್, ರವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಕೆ ಎ ಚಂದ್ರ, ಸಿಬ್ಬಂದಿಗಳಾದ ಎಆರ್ ಎಸ್ ಐ, ಸಂಜಯ್, ಹೆಚ್ ಸಿ-151 ನಾರಾಯಣ, ಪ್ರಕಾಶ್ ಎಲ್. ಸಿ. ಹೆಚ್. ಸಿ.-322, ಪವನ್ ಕುಮಾರ್ ಪಿಸಿ-30, ಯೋಗೇಶ ಪಿಸಿ-276, & ಹೆಚ್ ಜಿ- ರೆಹಮಾನ್ ಉರ್ ಅಜೀಜ್ ಮತ್ತು ಪೊಲೀಸ್ ಬಾತ್ಮೀದಾರರಾದ ಲಕ್ಷ್ಮಣರಾವ್, ಮೇಲ್ಕಂಡ ಪ್ರಕರಣದ ಆರೋಪಿಗಳನ್ನು ಮತ್ತು ಮಾಲನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಈ ಯಶಸ್ವಿ ಕಾರ್ಯಾಚರಣೆಯನ್ನು ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

ಭರ್ಜರಿ ಭೇಟೆಯಾಡಿದ ಮೈಸೂರು ಜಿಲ್ಲಾ ಪೊಲೀಸರು

0

ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಮಾರ್ಬಳ್ಳಿಹುಂಡಿ ಗ್ರಾಮದ ಶ್ರೀಮತಿ ಅನಿತಾ.ಎಂ.ಹೆಚ್ ಕೋಂ ಮಂಜುನಾಥ್ ಎಂಬುವವರು ದಿನಾಂಕ: 18-06-2026 ರಂದು ಜಯಪುರ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ಎಂದರೆ ತಮ್ಮ ಬಳಿಯಿದ್ದ 58 ಗ್ರಾಂ ತೂಕದ ಚಿನ್ನದ ಲಾಂಗ್ ನೆಕ್ಲೆಸ್ ಮತ್ತು 10 ಗ್ರಾಂ ತೂಕದ ಮುತ್ತಿನ ಚಿನ್ನದ ಓಲೆ & ಜುಮುಕಿಯನ್ನು ಮನೆಯ ಬೀರುವಿನಲ್ಲಿ ಇಟ್ಟಿದ್ದು ದಿನಾಂಕ 15-06-2026 ರಂದು ನೋಡಿದಾಗ ಎರಡೂ ಆಭರಣಗಳು ಕಳುವು ಆಗಿರುವುದು ತಿಳಿದ ಬಂದ ಮೇರೆಗೆ ಅಕ್ಕ-ಪಕ್ಕ ವಿಚಾರ ಮಾಡಿ ಎಲ್ಲೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಜಯಪುರ ಪೊಲೀಸ್ ಠಾಣೆಯಲ್ಲಿ ಮೊ.ನಂ 117/2026 ಕಲಂ, 305 ಬಿಎನ್‌ಎಸ್ ರೀತ್ಯ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದಾರೆ.


ಮೈಸೂರು ಗ್ರಾಮಾಂತರ ವೃತ್ತದ ಸಿಪಿಐ ಡಿ.ಬಿ.ಜಯಪ್ರಕಾಶ್ ರವರ ನೇತೃತ್ವದಲ್ಲಿ ಪ್ರಕರಣದ ಪತ್ತೆಗಾಗಿ ನೇಮಿಸಿದ್ದ ಜಯಪುರ ಪೊಲೀಸ್ ಠಾಣಾ ಪಿಎಸ್‌ಐ ಪ್ರಕಾಶ್ ಎತ್ತಿನಮನಿ ಹಾಗೂ ಅಪರಾಧ ಪತ್ತೆ ದಳದ ಸಿಬ್ಬಂದಿಗಳಿಗೆ ಭಾತ್ಮಿದಾರರಿಂದ ದೊರೆತ ಖಚಿತ ವರ್ತಮಾನದ ಮೇರೆಗೆ ದಿನಾಂಕ 30-06-2026 ರಂದು ಬೆಂಗಳೂರಿನ ಮಹಾಲಕ್ಷಿ ಲೇ ಔಟ್‌ನ ಎಪಿಎಂಸಿ ಸಮೀಪ ಆರೋಪಿ ರಂಗೇಗೌಡ ಎಂ.ವಿ @ಸಂತೋಷ ಬಿನ್ ವೆಂಕಟೇಶ, ಎಂಬಾತನನ್ನು ವಶಕ್ಕೆ ತೆಗೆದುಕೊಂಡು, ಆರೋಪಿಯನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ರಂಗೇಗೌಡನು ಬನ್ನೂರು, ಮೈಸೂರು ದಕ್ಷಿಣ, ಹುಣಸೂರು ಗ್ರಾಮಾಂತರ, ಸಾಲಿಗ್ರಾಮ ಮತ್ತು ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆಗಳಲ್ಲಿ ಕಳ್ಳತನ ಮಾಡಿದ್ದು, ಕಳ್ಳತನ ಮಾಡಿದ್ದ ಚಿನ್ನದ ಆಭರಣಗಳನ್ನು ಹಾಸನ ಟೌನಿನ ದೊಡ್ಡಗರಡಿ ಬೀದಿಯಲ್ಲಿ ಚಿನ್ನಬೆಳ್ಳಿ ಕೆಲಸ ಮಾಡುವ ಮರ‍್ನಾಲ್ಕು ಜನರಿಗೆ ಕೊಟ್ಟು ಹಣವನ್ನು ಪಡೆದುಕೊಂಡಿದ್ದು ಹಾಗೂ ಈಗಾಗಲೇ ಈತನ ಮೇಲೆ ಬೆಂಗಳೂರು, ಮಂಡ್ಯ, ಕೋಲಾರ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಒಟ್ಟು 17 ಕೇಸುಗಳು ದಾಖಲಾಗಿರುವ ವಿಚಾರವು ತಿಳಿದು ಬಂದಿರುತ್ತೆ. ಈತನ ದಸ್ತಗಿರಿಯಿಂದ ವಿವಿಧ ಠಾಣೆಗಳಲ್ಲಿ ವರದಿಯಾಗಿದ್ದ ಒಟ್ಟು 08 ಕಳವು ಪ್ರಕರಣಗಳು ಪತ್ತೆಯಾಗಿರುತ್ತೆ. ಆರೋಪಿಯು ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

ದಸ್ತಗಿರಿ ಮಾಡಿದ ಆರೋಪಿ ರಂಗೇಗೌಡ ಎಂ.ವಿ @ಸಂತೋಷ ಬಿನ್ ವೆಂಕಟೇಶ, 39 ವರ್ಷ, ಮುದಿಗೆರೆ ಗ್ರಾಮ, ಕಸಬಾ ಹೋಬಳಿ, ಆಲೂರು ತಾಲ್ಲ್ಲೂಕು, ಹಾಸನ ಜಿಲ್ಲೆ. ಆರೋಪಿಯಿಂದ ವಶಪಡಿಸಿಕೊಂಡ ಮಾಲಿನ ವಿವರ
ಒಟ್ಟು 498 ಗ್ರಾಂ ತೂಕದ ಚಿನ್ನದ ಒಡವೆಗಳು. ಒಟ್ಟು ಮೌಲ್ಯ ಸುಮಾರು 65, 25, 000/- ರೂಪಾಯಿಗಳು ಆರೋಪಿ ದಸ್ತಗಿರಿಯಿಂದ ಪತ್ತೆಯಾದ ಇತರೆ ಠಾಣೆಗಳ ಪ್ರಕರಣಗಳು ಪತ್ತೆಯಾಗಿವೆ.

ಠಾಣೆಯ ಹೆಸರು ಪತ್ತೆಯಾದ ಪ್ರಕರಣಗಳ ಸಂಖ್ಯೆ, ಜಯಪುರ ಪೊಲೀಸ್ ಠಾಣೆಯ 02 ಪ್ರಕರಣ, ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಯ 02, ಇಲವಾಲ ಪೊಲೀಸ್‌ ಠಾಣೆಯ 1, ಮೈಸೂರು ದಕ್ಷಿಣ ಪೊಲೀಸ್‌ ಠಾಣೆಯ 1, ಬನ್ನೂರು ಪೊಲೀಸ್‌ ಠಾಣೆಯ 1, ಸಾಲಿಗ್ರಾಮ ಪೊಲೀಸ್‌ ಠಾಣೆಯ 01 ಪ್ರಕರಣ ಸೇರಿ ಒಟ್ಟು 08 ಪ್ರಕರಣಗಳು ಪತ್ತೆಯಾಗಿವೆ ಎಂದು ಮೈಸೂರು ಜಿಲ್ಲಾ ಎಸ್‌ ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ, ಐ.ಪಿ.ಎಸ್, ಅಪರ ಪೊಲೀಸ್ ಅಧೀಕ್ಷಕರುಗಳಾದ ಸಿ. ಮಲ್ಲಿಕ್ ಹಾಗೂ ನಾಗೇಶ್.ಎಲ್, ಮೈಸೂರು ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರಾಜಣ್ಣ ರವರ ಮಾರ್ಗದರ್ಶನದಲ್ಲಿ ಸಿಪಿಐ ಡಿ.ಬಿ.ಜಯಪ್ರಕಾಶ್, ಜಯಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರಕಾಶ್ ಎತ್ತಿನಮನಿ ರವರು ಹಾಗೂ ಸಿಹೆಚ್‌ಸಿ-೨೩೧ ಪಚ್ಚೇಗೌಡ, ಪಿಸಿ-೩೯ ನಿಂಗಣ್ಣ ರವರುಗಳು ಮೇಲ್ಕಂಡ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಿ ಪ್ರಕರಣಗಳನ್ನು ಬೇದಿಸುವಲ್ಲಿ ಯಶಸ್ವಿಯಾಗಿರೆ.

2024ನೇ ಬ್ಯಾಚ್ ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಭೇಟಿ…!

0

ಕರ್ನಾಟಕ ರಾಜ್ಯಕ್ಕೆ ನೇಮಕವಾಗಿರುವ 2024ನೇ ಬ್ಯಾಚ್‌‌ನ ಪ್ರೊಬೆಷನರಿ ಐ.ಪಿ.ಎಸ್‌ ಅಧಿಕಾರಿಗಳು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದಲ್ಲಿ ಭೇಟಿಯಾದರು. ಈ ವೇಳೆ ಮಹತ್ತರ ಜವಾಬ್ದಾರಿ ಹೊತ್ತು ವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಈ ಎಲ್ಲಾ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಅಭಿನಂದಿಸಿ, ಶುಭ ಹಾರೈಸಿದರು.

ರಾಜ್ಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಅಂಜುಂ ಪರ್ವೇಜ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕಾದ ಎಂ.ಎ.ಸಲೀಂ, ಆಂತರಿಕ ಭದ್ರತಾ ವಿಭಾಗದ ಎಡಿಜಿಪಿ ರವಿ ಅವರು ಈ ವೇಳೆ ಉಪಸ್ಥಿತರಿದ್ದರು.

ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಕೇಂದ್ರ ಸ್ಥಾನಕ್ಕೆ ಭೇಟಿ ನೀಡಿ ನಂತರ ಡಿ ಎ ಆರ್ ಕೇಂದ್ರಸ್ಥಾನದ ಆವರಣದಲ್ಲಿ ಚಾಮರಾಜನಗರ ಗೃಹರಕ್ಷಕ ದಳ ವತಿಯಿಂದ ಆಯೋಜಿಸಿದ ‘ಜಿಲ್ಲಾ ಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟ-2025’ ರ ಸಮಾರೋಪ ಕಾರ್ಯಕ್ರಮ

0

ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ ಕೇಂದ್ರ ಸ್ಥಾನಕ್ಕೆ ಭೇಟಿ ನೀಡಿ ನಂತರ ಡಿ ಎ ಆರ್ ಕೇಂದ್ರಸ್ಥಾನದ ಆವರಣದಲ್ಲಿ ಚಾಮರಾಜನಗರ ಗೃಹರಕ್ಷಕ ದಳ ವತಿಯಿಂದ ಆಯೋಜಿಸಿದ ‘ಜಿಲ್ಲಾ ಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟ-2025’ ರ ಸಮಾರೋಪ ಕಾರ್ಯಕ್ರಮ