ದಿನಾಂಕ 10/08/2025 ರಂದು ಮಹಿಳಾ ಪೋಲಿಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ವಿಜಯಪುರ ಶಹರದ ರಾಜಕುಮಾರ್ ಲೇ ಔಟ್ ನಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಾರಿ ಮಟ್ರಿಕ್ ನಂತರ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಮನೆ ಮನೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಂಡು ಮತ್ತು ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಂಡು ಪೋಕ್ಸೋ ಕಾಯ್ದೆ,ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ,ಮಹಿಳೆ ಮತ್ತು ಮಕ್ಕಳ ರಕ್ಷಣೆ,ಸೈಬರ್ ಕ್ರೈಂ ,112 ERSS, 1098 ಮಕ್ಕಳ ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸಿದ್ದು ಇರುತ್ತದೆ.
ಕೋಲಾರ ಜಿಲ್ಲಾ ಪೊಲೀಸ್‌ವತಿಯಿಂದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ “ಮನೆ ಮನೆಗೆ ಪೊಲೀಸ್” ಯೋಜನೆಯ ಅಡಿಯಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಹಾಗೂ ಸಾರ್ವಜನಿಕ ಸಭೆ ಸೇರಿಸಿ ಕುಂದುಕೊರತೆ ವಿಚಾರಿಸಿ ಸಂಬಂಧ ಪಟ್ಟ ಇಲಾಖೆಗಳೊಂದಿಗೆ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಯಿತು ಹಾಗೂ ಸೈಬರ್ ಅಪರಾಧ ,112, ಪೋಕ್ಸೋ ಕಾಯ್ದೆ, ಮನೆ ಕಳ್ಳತನ, ಸರ ಕಳ್ಳತನ, ರಸ್ತೆ ಸಂಚಾರ ನಿಯಮ, ಬಾಲಕಾರ್ಮೀಕ ಪದ್ದತಿ, ಬಾಲ್ಯ ವಿವಾಹ, ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು.
ಬೀದರ ನಿವಾಸಿಯೊಬ್ಬರು ಬೀದರ ಗುಂಪಾ ಹತ್ತಿರದ Reliance Trends ದಲ್ಲಿ 10,000=00 ರೂಪಾಯಿ ಬೆಲೆ ಬಾಳುವ ಬಟ್ಟೆಗಳನ್ನು ಖರೀದಿಸಿ ಆಟೊದಲ್ಲಿ ಗುಂಪಾದಿಂದ ಪ್ರಯಾಣಿಸಿ ಬೀದರದ ಗುರುದ್ವಾರ್ ಕಮಾನ ಹತ್ತಿರ ಇಳಿದುಕೊಂಡು ಹೋಗಿರುತ್ತಾರೆ. ಸ್ವಲ್ಪ ಸಮಯದ ನಂತರ ತಮ್ಮ ಹತ್ತಿರದ ಬ್ಯಾಗಿನ ಬಗ್ಗೆ ಅರಿವು ಆದಾಗ ತಮ್ಮ ಬ್ಯಾಗನ್ನು ಆಟೋದ ಹಿಂದುಗಡೆ ಸಿಟಿನ ಮೇಲೆ ಬಿಟ್ಟಿರುವುದನ್ನು ಗಮನಿಸಿ, ಪ್ರಯಾಣಿಕ ಬೀದರದ AI ಸಿ.ಸಿ ಟಿವಿ ಕಮಾಂಡ ಸೆಂಟರ್ ಗೆ ಬಂದು ತಾವು ಪ್ರಯಾಣಿಸಿದ ಆಟೋವನ್ನು AI ಸಿ.ಸಿ ಟಿವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಹರ್ಷವರ್ಧನ ರವರು ಡಾ: ಬಿ.ಆರ್ ಅಂಬೇಡ್ಕರ ವೃತ್ತದ ಹತ್ತಿರ ವಾಹನ ಸಂಚರಿಸುತ್ತಿದ್ದನ್ನು ಗಮನಿಸಿ ಶ್ರೀ ಶ್ರೀಕಾಂತ, ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ರವರ ಸಹಾಯದಿಂದ ಆಟೋವನ್ನು ಬೀದರ ಜಿಲ್ಲಾ ಪೊಲೀಸ್ ಅಧಿಕ್ಷಕರ ಕಛೇರಿ ಸಿ.ಸಿ ಟಿವಿ ನಿಯಂತ್ರಣ ಕೊಠಡಿಗೆ ಕರೆಯಿಸಿ, ಆಟೋದ ಹಿಂದುಗಡೆ ಇದ್ದ ಬ್ಯಾಗನ್ನು ಶ್ರೀ ಹರ್ಷವರ್ಧನ ಮತ್ತು ಶ್ರೀ ಶ್ರೀಕಾಂತ ರವರ ಸಮಕ್ಷಮ ಆಟೋ ಡ್ರೈವರ ರವರ ಮುಖಾಂತರ ಬ್ಯಾಗಿನ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಪ್ರಮಾಣಿಕತೆ ಮೇರೆದ ಆಟೋ ಸಂ: KA38 6701 ಚಾಲಕ ಶ್ರೀ ಮಂಜುನಾಥ ರವರಿಗೆ ಸಮಸ್ತ ಬೀದರ ಜಿಲ್ಲಾ ಪೊಲೀಸರಿಂದ ಅಭಿನಂದನೆಗಳು. ನಿಮ್ಮ ಪ್ರಾಮಾಣಿಕತೆ ಎಲ್ಲರಿಗೂ ಪ್ರೇರಣೆ ಆಗಲಿ.
ಹೊನ್ನಾವರ: ಕಟ್ಟಡ ಕಾಮಗಾರಿ ಸ್ಥಳದಿಂದ ಕಬ್ಬಿಣದ ಸೆಂಟ್ರಿಂಗ್ ಸೀಟ್‌ಗಳನ್ನು ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳರ ತಂಡವೊಂದನ್ನು ಹೊನ್ನಾವರ ಪೊಲೀಸರು ಬಂಧಿಸಿ ಆರೋಪಿಗಳಿಂದ ₹5 ಲಕ್ಷ ಮೌಲ್ಯದ ಕಳವು ಮಾಡಿದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತವೀರ ಅಹಮ್ಮದ, ಷಹಾದ್-ಉಲ್ಲಾ, ಮಹ್ಮದ ಮನ್ಸೂರ, ಮತ್ತು ಕಲೀಮುಲ್ಲಾ ಅಲಿಯಾಸ್ ಕಲೀಂ ಬಂಧಿತ ಆರೋಪಿಗಳು.
ಕಳೆದ ತಿಂಗಳು, ಕಾಸರಕೋಡ ರೋಷನ್ ಮೊಹಲ್ಲಾದಲ್ಲಿನ ಮಸೀದಿ ಹತ್ತಿರ ನಿರ್ಮಾಣವಾಗುತ್ತಿದ್ದ ಕಟ್ಟಡವೊಂದರ ಬಳಿ ಇಟ್ಟಿದ್ದ ಕಬ್ಬಿಣದ ಸೆಂಟ್ರಿಂಗ್ ಸೀಟ್‌ಗಳು ಕಳವಾಗಿತ್ತು. ಜುಲೈ 15ರ ರಾತ್ರಿ 7 ಗಂಟೆಯಿಂದ ಜುಲೈ 16ರ ಬೆಳಗ್ಗೆ 9 ಗಂಟೆಯ ನಡುವಿನ ಅವಧಿಯಲ್ಲಿ ಈ ಕೃತ್ಯ ನಡೆದಿತ್ತು. ಈ ಬಗ್ಗೆ ಶ್ರೀ ರಾಮಾ ಲಕ್ಷ್ಮಣ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ತಾಂತ್ರಿಕ ಹಾಗೂ ಖಚಿತ ಮಾಹಿತಿಯ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ₹2 ಲಕ್ಷ ಮೌಲ್ಯದ 180 ಕಬ್ಬಿಣದ ಸೆಂಟ್ರಿಂಗ್ ಸೀಟ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ₹3 ಲಕ್ಷ ಮೌಲ್ಯದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ₹5 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ” ಜಿಲ್ಲೆಯನ್ನು ಶಾಂತಯುತವಾಗಿ ಇಡಲು ಕಾನೂನು ಸೂ ವ್ಯವಸ್ಥೆ ಕಾಪಾಡುವುದು ಅತೀ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕಳೆದ ಒಂದು ವಾರದಲ್ಲಿ ಬೀದರ ಜಿಲ್ಲಾದಾದ್ಯಂತ ಸಾರಿಗೆ ನೌಕರರ ಮುಷ್ಕರ ಬ/ಬ, ಚಿಟಗುಪ್ಪಾ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣದ ಪುರಾತನವಾದ ಅಗಸಿ (ಬೇಸ್) ಸ್ಥಳದಲ್ಲಿ ಗಡಿಯಾರವನ್ನು ಅಳವಡಿಸುವ ಕಾರ್ಯಕ್ರಮದ ಬ/ಬ, ನೂತನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೈ ಭೀಮ್ ಘರ್ಜನೆ ಸಮಿತಿ (ರಿ) ಕರ್ನಾಟಕ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ ರವರ ಬಗ್ಗೆ ವ್ಯಂಗವಾಗಿ ಮಾತಡಿರುವದನ್ನು ಖಂಡಿಸಿ ಪ್ರತಿಭಟನಾ ರಾಲಿ ಬ/ಬ ಹಾಗೂ ಜಿಲ್ಲೆಯಲ್ಲಿ ಗಣ್ಯರ ಮತ್ತು ಅತೀ ಗಣ್ಯರ ಕಾರ್ಯಕ್ರಮಗಳು, ಪ್ರವಾಸಗಳ ಸಮಯದಲ್ಲಿ ಅವರ ಸುರಕ್ಷತೆಯನ್ನು ಒದಗಿಸುದ್ದು ಮತ್ತು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಕಾನೂನು ಸುವ್ಯವಸ್ಥೆಗೆ ಯಶಸ್ವಿಯಾಗಿ ಜಿಲ್ಲೆಯ ಪೊಲೀಸರು ನಿರ್ವಹಿಸಿರುತ್ತಾರೆ.
ಜಿಲ್ಲೆಯ ಮೂರು ಉಪ-ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯವರು ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕಾನೂನು ಸೂ ವ್ಯವಸ್ಥೆ ಕಾಡುವಲ್ಲಿ ಅಚ್ಚು ಕಟ್ಟಾಗಿ ಬ/ಬ ಕರ್ತವ್ಯ ನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.
ಬೀದರ ಜಿಲ್ಲಾ ಪೊಲೀಸ್ ಜಿಲ್ಲೆಯಲ್ಲಿ ಶಾಂತಿ ಸೂ ವ್ಯವಸ್ಥೆ ಕಾಪಾಡುವುದು ಸದಾ ಕಾರ್ಯಪ್ರವರ್ತಗಾಗಿದ್ದು, ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.
ವಿದ್ಯಾರ್ಥಿ/ವಿದ್ಯಾರ್ಥಿನಿಯರ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕುರಿತಾಗಿ ರಚಿತಗೊಂಡ ಅಕ್ಕ ಪಡೆಗೆ ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ, ಬೀದರ ರವರು ಮಹಿಳೆಯರ, ಮಕ್ಕಳ ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸುರಕ್ಷತೆ ಕುರಿತು ವಿಶೇಷ ಮುತುವರ್ಜಿ ವಹಿಸಿ ಮಹಿಳೆಯರ, ಮಕ್ಕಳ ಸುರಕ್ಷತೆಗಾಗಿ task ನೀಡಿದ್ದು, ಮಾನ್ಯರ ನೇರ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಕಾರ್ಯ ಪ್ರವರ್ತರಾದ ಅಕ್ಕ ಪಡೆಯು ಶ್ರೀ ಶಿವನಗೌಡ ಪಾಟೀಲ್, ಪೊಲೀಸ್ ಉಪಾಧೀಕ್ಷಕರು, ಬೀದರ ಉಪ-ವಿಭಾಗ ರವರ ನೇತೃತ್ವದಲ್ಲಿ ಬೀದರ ನಗರದ ದಿ ಇನ್ಪಿನಿಟಿ ಶಾಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಮಹಿಳಾ & ಮಕ್ಕಳ ದೌರ್ಜನ್ಯ, ಬಾಲ್ಯ ವಿವಾಹ ನಿಷೇಧ ಕಾಯ್ದೆ, POCSO ಮಹಿಳಾ ಸುರಕ್ಷತೆ, ಸಂಚಾರಿ ಸುರಕ್ಷತಾ ನಿಯಮಗಳ ಕುರಿತಾಗಿ ಅರಿವು ಮೂಡಿಸಿ, ಸಹಾಯವಾಣಿ ಸಂ: 1098, ಸಹಾಯವಾಣಿ ಸಂ: 112, ಸೈಬರ್ ಅಪರಾಧ ಸಹಾಯವಾಣಿ ಸಂ: 1930 ಗಳ ಬಗ್ಗೆ ತಿಳುವಳಿಕೆ ನೀಡಿ ಯಾರೇ ಅಪರಿಚಿತ ವ್ಯಕ್ತಿ ಬಂದು ಯಾವುದೇ ರೀತಿ ಆಮಿಶ್ಯ ನೀಡಿದಲ್ಲಿ ಆಮಿಶ್ಯಕ್ಕೆ ಒಳಗಾಗದೇ ಹುಷಾರಾಗಿರುವಂತೆ ತಿಳಿಸಿ, ಶಾಲಾ ವಾಹನ ಚಾಲಕರಿಗೆ ಸಂಚಾರಿ ನಿಯಮಗಳ ಬಗ್ಗೆ ತಿಳುವಳಿಕೆ ನೀಡಿರುತ್ತಾರೆ. ನಾವು ಸದಾ ನಿಮ್ಮ ಸುರಕ್ಷತೆಗಾಗಿ ಇದ್ದು, ನೀವು ಭಯ ಪಡುವ ಅವಶ್ಯಕತೆ ಇಲ್ಲಾ ಸದಾ ನಿಮ್ಮೊಂದಿಗೆ ಇದ್ದೆವೆಂದು ಸಕಾರಾತ್ಮಕ ಭಾವವನ್ನು ಮೂಡಿಸುವ ಮೂಲಕ ಮಹಿಳೆಯರಿಗೆ, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ 24×7 ಸುರಕ್ಷತೆ ಒದಗಿಸುತ್ತಿರುವ ನಿಮ್ಮೇಲ್ಲರ ಮತ್ತು ಪೊಲೀಸ್ ಇಲಾಖೆಯ ಹೆಮ್ಮೆಯ “ಅಕ್ಕ ಪಡೆ” ಯ ಅಧಿಕಾರಿ, ಸಿಬ್ಬಂದಿ ರವರ ಕಾರ್ಯಕ್ಕೆ ಶ್ಲಾಘಿಸಿ ಅಭಿನಂದಿಸಲಾಗಿದೆ.
ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ” ಡ್ರಗ್ಸ್ ಅಬ್ಯುಸ್ ಕಮಿಟಿ” ಮೀಟಿಂಗ್ ನಡೆಸಿ ಸದ್ರಿ ಮೀಟಿಂಗ್ ನಲ್ಲಿ ಕಮಿಟಿ ಉದ್ದೇಶ ಮತ್ತು ಕಾರ್ಯ ಚಟುವಟಿಕೆ ಗಳ ಬಗ್ಗೆ ತಿಳಿಸಿ ನಂತರ ಇಲಾಖೆ ವತಿಯಿಂದ ವಿನ್ಯಾಸ ಗೊಳಿಸಿರುವ Q R code ನಲ್ಲಿ ಆನ್ ಲೈನ್ ಮುಖಾಂತರ ದೂರು ದಾಖಲಿಸುವ ವಿಧಾನ ದ ಬಗ್ಗೆ ತಿಳಿಸಿ Q R code ಕಾರ್ಯ ವಿಧಾನದ ಬಗ್ಗೆ ಹಾಗೂ NDPS ಕಾಯ್ದೆ, ಮಾದಕ ವಸ್ತುಗಳ ಬಳಕೆ ಮತ್ತು ಅದರಿಂದಾಗುವ ಪರಿಣಾಮಗಳ ಕುರಿತು ಮಾಹಿತಿ ನೀಡಿರುತ್ತಾರೆ.
ಚಾಮರಾಜನಗರ : ದಿನಾಂಕ 08-08-2025 ರಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ವಾರದ ಕವಾಯತಿನ ಗೌರವ ವಂದನೆ ಸ್ವೀಕರಿಸಿ, ಶಿಸ್ತು ಮತ್ತು ಸಂಯಮದಿಂದ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಅಧಿಕಾರಿ /ಸಿಬ್ಬಂದಿಗಳ ಕುಂದುಕೊರತೆ ಆಲಿಸಲಾಯಿತು.