ಬೀದರ ಜಿಲ್ಲಾ ಪೊಲೀಸ್ ರಿಂದ ಕಳೆದ ಒಂದು ವಾರದಲ್ಲಿ ಬೀದರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಕೊಂಡ ಕ್ರಮ

0

ಮಾನ್ಯ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರೀಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ” ಜಿಲ್ಲೆಯನ್ನು ಶಾಂತಯುತವಾಗಿ ಇಡಲು ಕಾನೂನು ಸೂ ವ್ಯವಸ್ಥೆ ಕಾಪಾಡುವುದು ಅತೀ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕಳೆದ ಒಂದು ವಾರದಲ್ಲಿ ಬೀದರ ಜಿಲ್ಲಾದಾದ್ಯಂತ ಸಾರಿಗೆ ನೌಕರರ ಮುಷ್ಕರ ಬ/ಬ, ಚಿಟಗುಪ್ಪಾ ಪೊಲೀಸ್ ಠಾಣಾ ವ್ಯಾಪ್ತಿಯ ಪಟ್ಟಣದ ಪುರಾತನವಾದ ಅಗಸಿ (ಬೇಸ್) ಸ್ಥಳದಲ್ಲಿ ಗಡಿಯಾರವನ್ನು ಅಳವಡಿಸುವ ಕಾರ್ಯಕ್ರಮದ ಬ/ಬ, ನೂತನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೈ ಭೀಮ್ ಘರ್ಜನೆ ಸಮಿತಿ (ರಿ) ಕರ್ನಾಟಕ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ ರವರ ಬಗ್ಗೆ ವ್ಯಂಗವಾಗಿ ಮಾತಡಿರುವದನ್ನು ಖಂಡಿಸಿ ಪ್ರತಿಭಟನಾ ರಾಲಿ ಬ/ಬ ಹಾಗೂ ಜಿಲ್ಲೆಯಲ್ಲಿ ಗಣ್ಯರ ಮತ್ತು ಅತೀ ಗಣ್ಯರ ಕಾರ್ಯಕ್ರಮಗಳು, ಪ್ರವಾಸಗಳ ಸಮಯದಲ್ಲಿ ಅವರ ಸುರಕ್ಷತೆಯನ್ನು ಒದಗಿಸುದ್ದು ಮತ್ತು ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಸೂಕ್ತ ಕಾನೂನು ಸುವ್ಯವಸ್ಥೆಗೆ ಯಶಸ್ವಿಯಾಗಿ ಜಿಲ್ಲೆಯ ಪೊಲೀಸರು ನಿರ್ವಹಿಸಿರುತ್ತಾರೆ.

ಜಿಲ್ಲೆಯ ಮೂರು ಉಪ-ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಯವರು ತಮ್ಮ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕಾನೂನು ಸೂ ವ್ಯವಸ್ಥೆ ಕಾಡುವಲ್ಲಿ ಅಚ್ಚು ಕಟ್ಟಾಗಿ ಬ/ಬ ಕರ್ತವ್ಯ ನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಯವರ ಕಾರ್ಯಕ್ಕೆ ಶ್ಲಾಘಿಸಲಾಗಿದೆ.

ಬೀದರ ಜಿಲ್ಲಾ ಪೊಲೀಸ್ ಜಿಲ್ಲೆಯಲ್ಲಿ ಶಾಂತಿ ಸೂ ವ್ಯವಸ್ಥೆ ಕಾಪಾಡುವುದು ಸದಾ ಕಾರ್ಯಪ್ರವರ್ತಗಾಗಿದ್ದು, ಬೀದರ ಜಿಲ್ಲಾ ಪೊಲೀಸ್ ಸದಾ ನಿಮ್ಮ ಸೇವೆಯಲ್ಲಿ.

ಬೀದರ ಜಿಲ್ಲಾ ಪೊಲೀಸ್ ಇಲಾಖೆಯ ವಿಶೇಷ ಮಹಿಳಾ ಪೊಲೀಸ್ ತಂಡ “ಅಕ್ಕ ಪಡೆ” ಅವರಿಂದ ಅರಿವು ಕಾರ್ಯಕ್ರಮ

0

ವಿದ್ಯಾರ್ಥಿ/ವಿದ್ಯಾರ್ಥಿನಿಯರ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕುರಿತಾಗಿ ರಚಿತಗೊಂಡ ಅಕ್ಕ ಪಡೆಗೆ ಮಾನ್ಯ ಶ್ರೀ ಪ್ರದೀಪ್ ಗುಂಟಿ, ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ, ಬೀದರ ರವರು ಮಹಿಳೆಯರ, ಮಕ್ಕಳ ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸುರಕ್ಷತೆ ಕುರಿತು ವಿಶೇಷ ಮುತುವರ್ಜಿ ವಹಿಸಿ ಮಹಿಳೆಯರ, ಮಕ್ಕಳ ಸುರಕ್ಷತೆಗಾಗಿ task ನೀಡಿದ್ದು, ಮಾನ್ಯರ ನೇರ ಮಾರ್ಗದರ್ಶನ ಮತ್ತು ನಿರ್ದೇಶನದಂತೆ ಕಾರ್ಯ ಪ್ರವರ್ತರಾದ ಅಕ್ಕ ಪಡೆಯು ಶ್ರೀ ಶಿವನಗೌಡ ಪಾಟೀಲ್, ಪೊಲೀಸ್ ಉಪಾಧೀಕ್ಷಕರು, ಬೀದರ ಉಪ-ವಿಭಾಗ ರವರ ನೇತೃತ್ವದಲ್ಲಿ ಬೀದರ ನಗರದ ದಿ ಇನ್ಪಿನಿಟಿ ಶಾಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಮಹಿಳಾ & ಮಕ್ಕಳ ದೌರ್ಜನ್ಯ, ಬಾಲ್ಯ ವಿವಾಹ ನಿಷೇಧ ಕಾಯ್ದೆ, POCSO ಮಹಿಳಾ ಸುರಕ್ಷತೆ, ಸಂಚಾರಿ ಸುರಕ್ಷತಾ ನಿಯಮಗಳ ಕುರಿತಾಗಿ ಅರಿವು ಮೂಡಿಸಿ, ಸಹಾಯವಾಣಿ ಸಂ: 1098, ಸಹಾಯವಾಣಿ ಸಂ: 112, ಸೈಬರ್ ಅಪರಾಧ ಸಹಾಯವಾಣಿ ಸಂ: 1930 ಗಳ ಬಗ್ಗೆ ತಿಳುವಳಿಕೆ ನೀಡಿ ಯಾರೇ ಅಪರಿಚಿತ ವ್ಯಕ್ತಿ ಬಂದು ಯಾವುದೇ ರೀತಿ ಆಮಿಶ್ಯ ನೀಡಿದಲ್ಲಿ ಆಮಿಶ್ಯಕ್ಕೆ ಒಳಗಾಗದೇ ಹುಷಾರಾಗಿರುವಂತೆ ತಿಳಿಸಿ, ಶಾಲಾ ವಾಹನ ಚಾಲಕರಿಗೆ ಸಂಚಾರಿ ನಿಯಮಗಳ ಬಗ್ಗೆ ತಿಳುವಳಿಕೆ ನೀಡಿರುತ್ತಾರೆ. ನಾವು ಸದಾ ನಿಮ್ಮ ಸುರಕ್ಷತೆಗಾಗಿ ಇದ್ದು, ನೀವು ಭಯ ಪಡುವ ಅವಶ್ಯಕತೆ ಇಲ್ಲಾ ಸದಾ ನಿಮ್ಮೊಂದಿಗೆ ಇದ್ದೆವೆಂದು ಸಕಾರಾತ್ಮಕ ಭಾವವನ್ನು ಮೂಡಿಸುವ ಮೂಲಕ ಮಹಿಳೆಯರಿಗೆ, ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ 24×7 ಸುರಕ್ಷತೆ ಒದಗಿಸುತ್ತಿರುವ ನಿಮ್ಮೇಲ್ಲರ ಮತ್ತು ಪೊಲೀಸ್ ಇಲಾಖೆಯ ಹೆಮ್ಮೆಯ “ಅಕ್ಕ ಪಡೆ” ಯ ಅಧಿಕಾರಿ, ಸಿಬ್ಬಂದಿ ರವರ ಕಾರ್ಯಕ್ಕೆ ಶ್ಲಾಘಿಸಿ ಅಭಿನಂದಿಸಲಾಗಿದೆ.

ಕಾರ್ಕಳದಲ್ಲಿ ಡ್ರಗ್ಸ್ ಅಬ್ಯುಸ್ ಕಮಿಟಿ ಮೀಟಿಂಗ್

0

ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ” ಡ್ರಗ್ಸ್ ಅಬ್ಯುಸ್ ಕಮಿಟಿ” ಮೀಟಿಂಗ್ ನಡೆಸಿ ಸದ್ರಿ ಮೀಟಿಂಗ್ ನಲ್ಲಿ ಕಮಿಟಿ ಉದ್ದೇಶ ಮತ್ತು ಕಾರ್ಯ ಚಟುವಟಿಕೆ ಗಳ ಬಗ್ಗೆ ತಿಳಿಸಿ ನಂತರ ಇಲಾಖೆ ವತಿಯಿಂದ ವಿನ್ಯಾಸ ಗೊಳಿಸಿರುವ Q R code ನಲ್ಲಿ ಆನ್ ಲೈನ್ ಮುಖಾಂತರ ದೂರು ದಾಖಲಿಸುವ ವಿಧಾನ ದ ಬಗ್ಗೆ ತಿಳಿಸಿ Q R code ಕಾರ್ಯ ವಿಧಾನದ ಬಗ್ಗೆ ಹಾಗೂ NDPS ಕಾಯ್ದೆ, ಮಾದಕ ವಸ್ತುಗಳ ಬಳಕೆ ಮತ್ತು ಅದರಿಂದಾಗುವ ಪರಿಣಾಮಗಳ ಕುರಿತು ಮಾಹಿತಿ ನೀಡಿರುತ್ತಾರೆ.

ಚಾಮರಾಜನಗರದಲ್ಲಿ ವಾರದ ಪೋಲೀಸ್ ಕವಾಯತು

0

ಚಾಮರಾಜನಗರ : ದಿನಾಂಕ 08-08-2025 ರಂದು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ವಾರದ ಕವಾಯತಿನ ಗೌರವ ವಂದನೆ ಸ್ವೀಕರಿಸಿ, ಶಿಸ್ತು ಮತ್ತು ಸಂಯಮದಿಂದ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಅಧಿಕಾರಿ /ಸಿಬ್ಬಂದಿಗಳ ಕುಂದುಕೊರತೆ ಆಲಿಸಲಾಯಿತು.

ಡ್ರೋನ್‌ಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದ ಕಲಬುರಗಿ ಪೊಲೀಸ್ ಆಯುಕ್ತರು

0

ಮಾನ್ಯ ಪೊಲೀಸ್ ಆಯುಕ್ತರಾದ ಡಾ|| ಶರಣಪ್ಪ ಎಸ್ ಡಿ., ಐಪಿಎಸ್ ರವರು ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯಕ್ಕೆ ನೂತನವಾಗಿ ಒದಗಿಸಲಾದ Nimble-i ಮತ್ತು NS01 ಡ್ರೋನ್‌ಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು. ಈ ಡ್ರೋನ್‌ಗಳು AI-ಚಾಲಿತ ಕಣ್ಗಾವಲು ವೈಶಿಷ್ಟ್ಯತೆಯನ್ನು ಹೊಂದಿದ್ದು ಕಲಬುರಗಿ ನಗರ ಪೊಲೀಸ್ ಸೇವೆಗೆ ಸಜ್ಜುಗೊಂಡಿವೆ.

ಧಾರವಾಡದಲ್ಲಿ ಗಣಪತಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಭೆ

0

ಧಾರವಾಡ : ದಿನಾಂಕ 09-08-2025 ರಂದು ಮಾನ್ಯ ಪೊಲೀಸ್ ಅಧೀಕ್ಷಕರು, ಜಿಲ್ಲೆಯ ಎಲ್ಲ ಠಾಣೆಯ ಎಸ್‌ ಬಿ ಕಾನ್ಸ್ಟೇಬಲ್ ಗಳಿಗೆ ಹಾಗೂ ಸೊಷಿಯಲ್‌ ಮಿಡಿಯಾ ಸಿಬ್ಬಂದಿಗಳಿಗೆ ಸಭೆಯನ್ನು ಕೈಗೊಂಡು ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್‌-ಮಿಲಾದ್‌ ಹಬ್ಬಗಳ ಸೂಕ್ತ ಬಂದೋಬಸ್ತ್ ಮಾಡಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಸೋಷಿಯಲ್ ಮೀಡಿಯಾ ಚಟುವಟಿಕೆಗಳ ಮೇಲೆ ನಿಗಾವಹಿಸುವಂತೆ ಹಲವು ನಿರ್ದೇಶನಗಳನ್ನು ನೀಡಿದರು.

ಬಾದಾಮಿ ಪೊಲೀಸರಿಂದ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಲಾಯಿತು

0

ಬಾದಾಮಿ ನಗರದಲ್ಲಿ ದ್ವಿ ಚಕ್ರ ವಾಹನ ಸವಾರರಿಗೆ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸುವಂತೆ ಹಾಗೂ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲಾಯಿತು.

ಮತಿ ಉಮಾ ಪ್ರಶಾಂತ್ IPS ರವರು ಅಧಿಕಾರಿ ಸಿಬ್ಬಂದಿಗಳಿಗೆ ರಾಖಿ ಕಟ್ಟುವ ಮೂಲಕ ಜಿಲ್ಲೆಯ ಎಲ್ಲಾ ಅಧಿಕಾರಿ ಸಿಬ್ಬದಿಗಳಿಗೆ ರಕ್ಷಾ ಬಂಧನದ ಶುಭಕೋರಿದರು.

0

ದಾವಣಗೆರೆ : ರಕ್ಷಾ ಬಂಧನದ ಅಂಗವಾಗಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಅಧಿಕಾರಿ ಸಿಬ್ಬಂದಿಗಳಿಗೆ ರಾಖಿ ಕಟ್ಟುವ ಮೂಲಕ ಜಿಲ್ಲೆಯ ಎಲ್ಲಾ ಅಧಿಕಾರಿ ಸಿಬ್ಬದಿಗಳಿಗೆ ರಕ್ಷಾ ಬಂಧನದ ಶುಭಕೋರಿದರು

ಕುಂದಾಪುರ ನಗರದಲ್ಲಿ ಮನೆ ಮನೆಗೆ ಪೋಲೀಸ್ ಕಾರ್ಯಕ್ರಮ

0

ಉಡುಪಿ : ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಬೀಟ್ ವ್ಯಾಪ್ತಿಯ ಪ್ರಮುಖರನ್ನು ಠಾಣೆಗೆ ಬರಮಾಡಿಕೊಂಡು, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ, ದ್ರಷ್ಟಿ ಯೋಜನೆ, ಇ- ಬೀಟ್ ವ್ಯವಸ್ಥೆ ಬಗ್ಗೆ ತಿಳುವಳಿಕೆ ನೀಡಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಾಯಿತು.

ರೋಣ ತಾಲೂಕಿನಲ್ಲಿ ಶಾಲೆ ಮಕ್ಕಳಿಗೆ ಕಾನೂನು ಅರಿವು ಕಾರ್ಯಕ್ರಮ

0

ಈ ದಿನ ರೋಣ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಿಗೇರಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ಶಾಲೆಯಲ್ಲಿ ಮಕ್ಕಳಿಗೆ ಬಾಲ್ಯ ವಿವಾಹ, ಬಾಲ ಕಾರ್ಮಿಕ, ಪೋಕ್ಸೋ ಕಾಯ್ದೆ , ಭಿಕ್ಷಾಟನೆ ಹಾಗೂ ತುರ್ತು ಸಹಾಯವಾಣಿಗಳ ಕುರಿತು ಕಾನೂನು ಅರಿವು ಹಾಗೂ ನೆರವು ಬಗ್ಗೆ ಮಾಹಿತಿ ನೀಡಲಾಯಿತು.