ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಪ್ರಯುಕ್ತ ಪೂರ್ವಭಾವಿ ಸಭೆ

0

ಮುಂಬರುವ ಚಿತ್ರದುರ್ಗ ಹಿಂದೂ ಮಹಾಗಣಪತಿಯ ಬೃಹತ್ ಶೋಭಾಯಾತ್ರೆ ಪ್ರಯುಕ್ತ ಮಾನ್ಯ ಪೊಲೀಸ್ ಅಧೀಕ್ಷಕರು ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಿಂದೂ ಸಂಘಟನೆಯ ಮುಖಂಡರುಗಳೊಂದಿಗೆ ಹಾಗೂ ಪದಾಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನೆಡೆಸಿ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಹಾಗೂ ಹಬ್ಬದ ಆಚರಣೆ ಮತ್ತು ಶೋಭಾಯಾತ್ರೆ ಸಮಯದಲ್ಲಿ ಯಾವುದೇ ರೀತಿಯ ಆಹಿತಕರ ಘಟನೆಗಳು ನಡೆಯದಂತೆ ಕ್ರಮವಹಿಸಲು ಸೂಕ್ತ ಸೂಚನೆಗಳನ್ನು ನೀಡಿದರು.

ರ‍್ಯಾಗಿಂಗ್ ನಿಂದಾಗುವ ದುಷ್ಪರಿಣಾಮಗಳ ಕುರಿತು ತಿಳುವಳಿಕೆ, ಕಾನೂನು ಅರಿವು ಕಾರ್ಯಕ್ರಮ

0

ಬೀಳಗಿ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಗಂಡಿಯ ಶ್ರೀಮತಿ ಶಾಂತಾದೇವಿ ಮೆಮೋರಿಯಲ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ರ‍್ಯಾಗಿಂಗ್ ವಿರೋಧಿ ದಿನ ಹಾಗೂ ಸಪ್ತಾಹದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ನಿಂದಾಗುವ ದುಷ್ಪರಿಣಾಮಗಳ ಕುರಿತು ತಿಳುವಳಿಕೆ ನೀಡಿ,ಕಾನೂನು ಅರಿವು ಮೂಡಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯಲ್ಲಿ “ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ”

0

ಮನೆ ಮನೆಗೆ ಪೊಲೀಸ್‌ ಎಂಬ ಕಾರ್ಯಕ್ರಮದ ನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯ ಗ್ರಾಮ ಹಾಗೂ ನಗರಗಳಲ್ಲಿರುವ ಮನೆಗಳಿಗೆ ಭೇಟಿ ನೀಡಿ, ಈ ಕಾರ್ಯಕ್ರಮದ ಉದ್ದೇಶದ ಬಗ್ಗೆ ತಿಳಿಸಿ, ಜಾಗೃತಿ ಮೂಡಿಸಲಾಯಿತು.

ಬಳ್ಳಾರಿ ನಗರ ಉಪವಿಭಾಗ ಕಛೇರಿಗೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿಗಳು

0

ಬಳ್ಳಾರಿ ಸಂಚಾರ ಪೊಲೀಸ್ ಠಾಣೆಗೆ ಶೋಭಾ ರಾಣಿ, ಐಪಿಎಸ್ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿವೀಕ್ಷಣೆ ಕೈಗೊಂಡು ಯು.ಐ. ಇರುವ ಪ್ರಕಣಗಳ ಬಗ್ಗೆ ಪರಿಶೀಲಿಸಿ ನಗರದ ಸಂಚಾರ ನಿಯಂತ್ರಣದ ಬಗ್ಗೆ ಸೂಕ್ತವಾದ ಸಲಹೆ/ಸೂಚನೆಗಳನ್ನು ನೀಡಲಾಯಿತು ಮತ್ತು ಬಳ್ಳಾರಿ ನಗರ ಉಪವಿಭಾಗ ಕಛೇರಿಗೆ ಭೇಟಿನೀಡಿ ನಗರ ಪೊಲೀಸ್ ಠಾಣೆಗಳ ಹೊಸ ವ್ಯಾಪ್ತಿಯ ಬಗ್ಗೆ ಚರ್ಚಿಸಲಾಯಿತು.

ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳಿಗೆ ಮಾದಕ ವ್ಯಸನ, ಸೈಬರ್ ಅಪರಾಧ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಪೊಲೀಸರ ಜಾಗೃತಿ ಕಾರ್ಯಕ್ರಮ

0

ಚಾಮರಾಜನಗರ: ದಿನಾಂಕ:11-08-2025 ರಂದು ಯಳಂದೂರು ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿರವರು ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು, ಸೈಬರ್ ಅಪರಾಧಗಳು, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಪಾಲನೆ ಹಾಗೂ ಸೈಬರ್ ಕ್ರೈಂ ಸಹಾಯವಾಣಿ 1930 ಮತ್ತು ERSS 112 ನ ಬಗ್ಗೆ ಅರಿವು ಮೂಡಿಸಿರುತ್ತಾರೆ.

ಹೊಳೆಹೊನ್ನೂರು ಪೊಲೀಸ್‌ ಠಾಣಾ ಸಿಬ್ಬಂಧಿಯವರಿಗೆ ಸನ್ಮಾನ

0

ಶಿವಮೊಗ್ಗ: “ಮನೆ ಮನೆಗೆ ಪೊಲಿಸ್‌” ಭೇಟಿ ಕರ್ತವ್ಯದ ವೇಳೆ ಪೋಷಕತ್ವದಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ ಅವರಿಗೆ ಆಶ್ರಯ ಕಲ್ಪಿಸಲು ಶ್ರಮವಹಿಸಿ, ಉತ್ತಮ ಕರ್ತವ್ಯ ಮಾಡಿದ ಹೊಳೆಹೊನ್ನೂರು ಪೊಲೀಸ್‌ ಠಾಣಾ ಸಿಬ್ಬಂಧಿಯವರಾದ ಶ್ರೀ ಆನಂದ ಹೆಚ್‌.ವಿ ಸಿಹೆಚ್‌ಸಿ ರವರಿಗೆ ಸನ್ಮಾನ.

ರಾಜ್ಯ ಸರ್ಕಾರದ ನೂತನ ಯೋಜನೆ ಮನೆ ಮನೆ ಪೊಲೀಸ್‌ ಭೇಟಿ ಯೋಜನೆಯನ್ವಯ ಶ್ರೀ ಮಿಥುನ್‌ ಕುಮಾರ್‌ ಜಿ ಕೆ, ಐಪಿಎಸ್‌, ಮಾನ್ಯ ಪೊಲೀಸ್‌ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ರವರ ಮಾರ್ಗದರ್ಶನದಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಎಲ್ಲಾ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ.

ಆ ನಿಟ್ಟಿನಲ್ಲಿ ದಿನಾಂಕ 04/08/2025 ರಂದು ಭದ್ರಾವತಿ ಉಪ ವಿಭಾಗ ಹೊಳೆಹೊನ್ನೂರು ಪೊಲೀಸ್‌ ಠಾಣಾ ಸಿ.ಹೆಚ್‌.ಸಿ ರವರಾದ ಶ್ರೀ ಆನಂದ ಹೆಚ್‌.ವಿ ರವರು ಠಾಣಾ ವ್ಯಾಪ್ತಿಯ ಮುಸ್ಲಿಂ ಕ್ಯಾಂಪ್‌ ಗ್ರಾಮದಲ್ಲಿ ಕರ್ತವ್ಯದಲ್ಲಿದ್ದಾಗ ಪೋಷಕರಿಬ್ಬರೂ ಮೃತಪಟ್ಟ 09 ವರ್ಷ ಹಾಗೂ 03 ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳು ಪೋಷಕತ್ವದಿಂದ ವಂಚಿತರಾಗಿರುವುದು ಕಂಡು ಬಂದಿರುತ್ತದೆ. ಅವರಿಗೆ ಆಶ್ರಯ ಕಲ್ಪಿಸುವ ಸಂಬಂಧ ಭದ್ರಾವತಿಯ ಡಾನ್‌ ಬೋಸ್ಕೋ ಸಂಸ್ಥೆ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಶಿವಮೊಗ್ಗರವರನ್ನು ಸಂಪರ್ಕಿಸಿ, ಇಬ್ಬರೂ ಪುಟ್ಟ ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಡುವುದರ ಉತ್ತಮ ಕರ್ತವ್ಯ ಮಾಡಿ, ಘನ ರಾಜ್ಯ ಸರ್ಕಾರದ ಮನೆ ಮನೆ ಪೊಲೀಸ್‌ ಯೋಜನೆಯ ಉದ್ದೇಶವನ್ನು ಕಾರ್ಯಗತಗೊಳಿಸಿರುತ್ತಾರೆ.

ಶ್ರೀ ಆನಂದ ಹೆಚ್‌.ವಿ ರವರ ಈ ಉತ್ತಮ ಕರ್ತವ್ಯಕ್ಕಾಗಿ ದಿನಾಂಕಃ 11-08-೨೦೨೫ ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್‌ ವತಿಯಿಂದ ಜಿಲ್ಲಾ ಪೊಲೀಸ್‌ ಕಛೇರಿಯಲ್ಲಿ, ಶ್ರೀ ಆನಂದ ಹೆಚ್‌.ವಿ ರವರಿಗೆ ಪ್ರಶಂಸನಾ ಪತ್ರವನ್ನು ನೀಡಿ ರವಿಸಲಾಯಿತು.

ಉಡುಪಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ, ಮಾದಕ ದ್ರವ್ಯ, ಮತ್ತು ಸೈಬರ್ ಜಾಗೃತಿ ಕಾರ್ಯಕ್ರಮ

0

ಉಡುಪಿ: ಶಂಕರನಾರಾಯಣ ಠಾಣಾ ವ್ಯಾಪ್ತಿಯ ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಪದವಿ ಕೇಂದ್ರ ಇಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮತ್ತು ಅದರ ಬಗ್ಗೆ ಮಾಹಿತಿ ಗಳ ಬಗ್ಗೆ ಸದ್ರಿ ಕಾಲೇಜು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಲಾಯಿತು. ಹಾಗೂ ಕಾಲೇಜು ಪರಿಸರದಲ್ಲಿ ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟ ಇದರ ಬಗ್ಗೆ ಮಾಹಿತಿ ನೀಡುವಂತೆ ಹಾಗೂ ಕಾಲೇಜು ಹಂತದಲ್ಲಿ ಹೊಸದಾಗಿ ಆಗಿರುವ ಡ್ರಗ್ಸ್ ಕಮಿಟಿ ಇದರ ಬಗ್ಗೆ ತಿಳಿಸಲಾಯಿತು. ಸಂಚಾರ ನಿಯಮ ಹಾಗೂ 112 ಸಹಾಯವಾಣಿ, ಸೈಬರ್ ಅಪರಾದ ಹಾಗೂ 1930 ತುರ್ತು ಕರೆ ಇದರ ಬಗ್ಗೆ ವಿವರವಾಗಿ ತಿಳಿಸಲಾಯಿತು.

ಮೈಸೂರು ಜಿಲ್ಲೆಯಲ್ಲಿ “ಮನೆ-ಮನೆಗೆ ಪೊಲೀಸ್” ಕಾರ್ಯಕ್ರಮ

0

“ಮನೆ-ಮನೆಗೆ ಪೊಲೀಸ್” ಎಂಬ ಪರಿಕಲ್ಪನೆಯಡಿ ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆ,ಸೈಬರ್ ಅಪರಾಧ,ಬಾಲ್ಯ ವಿವಾಹದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಬೆಟಗೇರಿ ಪೋಲೀಸರ ಕಾರ್ಯಾಚರಣೆ

0

ಗದಗ: ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣವನ್ನು ಡಿಎಸ್ಪಿ ಗದಗ ರವರ ನೇತೃತ್ವದ ತಂಡ ಯಶಸ್ವಿಯಾಗಿ ಭೇದಿಸಿ, ಇಬ್ಬರು ಆರೋಪಿತರನ್ನು ಬಂಧಿಸಿದೆ. ಆರೋಪಿತರಿಂದ ₹4,17,942 ಮೌಲ್ಯದ ನಟ್‌-ಬೋಲ್ಟ್‌,ಡೈ ಹಾಗೂ ಸ್ಕ್ರೂ ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಆಟೋ-ರಿಕ್ಷಾಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದೆ. ಈ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿರವರ ಕಾರ್ಯಕ್ಷಮತೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರೋಹನ್ ಜಗದೀಶ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ.