





ಕೋಲಾರ: ಕೋಲಾರ ಜಿಲ್ಲೆಯ ಗಲ್ ಪೇಟೆ, ಮುಳಬಾಗಿಲು ನಗರ, ಮಾಲೂರು ಮತ್ತು ಕೋಲಾರ ನಗರ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದು ಅದರಂತೆ ಸಿ. ಇ. ಐ.ಅರ್ ಪೋರ್ಟೆಲ್ ಮೂಲಕ ಕಳುವಾಗಿದ್ದ ಮೊಬೈಲ್ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರಿಸಲಾಯಿತು.





ಮೈಸೂರು: ಉದಯಗಿರಿ ಪೊಲೀಸ್ ಠಾಣೆಯ ಅಧಿಕಾರಿ & ಸಿಬ್ಬಂದಿಗಳು ತಮ್ಮ ಠಾಣಾ ವ್ಯಾಪ್ತಿಯ ಪ್ರದೇಶಗಳಲ್ಲಿ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು, ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಲು ಹಾಗೂ ರೌಡಿಗಳು/ಎಂಒಬಿಗಳು/ಸಮಾಜ ಘಾತುಕ ವ್ಯೆಕ್ತಿಯಗಳ ಮೇಲೆ ನಿಗಾವಹಿಸಲು ಕಮಾಂಡೋ ಪಡೆಯೊಂದಿಗೆ ಕಾಲ್ನಡಿಗೆ ಮೂಲಕ ವಿಶೇಷ ಗಸ್ತು ಮಾಡಿ ತಮ್ಮ ಠಾಣಾ ವ್ಯಾಪ್ತಿಯ ಪ್ರದೇಶಗಳ ಮೇಲೆ ನಿಯಂತ್ರಣ ಹೊಂದುವ ಸಲುವಾಗಿ ಅನುಮಾನಸ್ಪದ ವ್ಯೆಕ್ತಿಗಳು & ವಾಹನಗಳನ್ನು ತಪಾಸಣೆ ನಡೆಸಲಾಯಿತು.




ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಈ ದಿನ ಕಾಡುಗೋಡಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಶಾಂತಿ ಸೌಹಾರ್ದತೆ ಸಭೆಯನ್ನು ಹಮ್ಮಿಕೊಂಡಿದ್ದು ಹಾಗೂ ಹಬ್ಬದ ಆಚರಣೆ ಬಗ್ಗೆ ಕೆಲವು ಸಲಹೆ ಮತ್ತು ಸೂಚನೆಗಳನ್ನು ಎಸಿಪಿ ಮೇಡಂ ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಅವರು ನೀಡಿರುತ್ತಾರೆ.

79 ನೇ ಸ್ವಾತಂತ್ರೋತ್ಸವದ ಅಂಗವಾಗಿ ಕಛೇರಿಯಲ್ಲಿ ಡಾ. ರವಿಕಾಂತೇಗೌಡ ಐಪಿಎಸ್, ಮಾನ್ಯ ಐಜಿಪಿ ಪೂರ್ವ ವಲಯ ರವರು ದ್ವಜಾರೋಹಣ ನೆರೆವೇರಿಸಿದರು. ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪರಮೇಶ್ವರ ಹೆಗಡೆ ರವರು ಸೇರಿದಂತೆ ಪೊಲೀಸ್ /ಲಿಪಿಕಾ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎಲ್ಲಾ ಅಧಿಕಾರಿ ಸಿಬ್ಬಂದಿಗಳಿಗೆ 79 ನೇ ಸ್ವಾತಂತ್ರೋತ್ಸವದ ಶುಭಾಶಯಗಳನ್ನು ತಿಳಿಸಿದರು.












ಪೊಲೀಸ್ ಆಯುಕ್ತರ ಕಛೇರಿಯ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPS ರವರ ನೇತೃತ್ವದಲ್ಲಿ ಧ್ವಜಾರೋಹಣ ಮಾಡುವುದರ ಮೂಲಕ ಆಚರಿಸಲಾಯಿತು. ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ & ಅವರ ಕುಟುಂಬದವರಿಗೆ ಹಾಗು ನಾಡಿನ ಸಮಸ್ತ ಜನತೆಗೆ 79ನೇ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ಕೋರಿದರು. ಈ ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಆಯುಕ್ತರುಗಳಾದ ಕುಮಾರಿ ಬಿಂದು ಮಣಿ RN IPS, ಕಾನೂನು & ಸುವ್ಯವಸ್ಥೆ, ಶ್ರೀ ಸುಂದರ್ ರಾಜ್ K.S. ಅಪರಾಧ & ಸಂಚಾರರವರು, ಶ್ರೀ ಸಿದ್ದನಗೌಡ ವೈ ಪಾಟೀಲ, CAR, ಶ್ರೀ ಮಾರುತಿ ಎ ಕಮಾಂಡೆಂಟ್ KARP Mounted & ಹಿರಿಯ ಪೊಲೀಸ್ ಅಧಿಕಾರಿಗಳು & ಸಿಬ್ಬಂದಿಗಳು ಉಪಸ್ಥಿತರಿದ್ದರು.















