




During the Independence Day Parade, 46 officers and staff of the Academy were recognized for their exceptional contributions to the Academy’s functioning, and they received the Director’s Commendation & Insignia, along with the Director’s Commendation Roll.














79ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಂಗಳೂರು ನಗರ ಪೊಲೀಸ್ ಹಾಗೂ ವಿಶೇಷ ಕಾರ್ಯ ಪಡೆ (Special Action Force – SAF) ಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ನಗರದ ನವಭಾರತ ವೃತ್ತದಿಂದ ಅಂಬೇಡ್ಕರ್ ವೃತ್ತ, ಕ್ಲಾಕ್ ಟವರ್ ಮಾರ್ಗವಾಗಿ ಮಂಗಳೂರು ನಗರ ಪುರಭವನದವರೆಗೆ ತ್ರಿವರ್ಣ ಧ್ವಜವನ್ನು ಹಿಡಿದು ರೂಟ್ ಮಾರ್ಚ್ ನಡೆಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.

ಕಲಬುರಗಿ: ಶಾಂತನು ಸಿನ್ಹಾ IPS, ಪೊಲೀಸ್ ಉಪ ಮಹಾನಿರೀಕ್ಷಕರು ಈಶಾನ್ಯ ವಲಯ ಕಲಬುರಗಿ ರವರು ಜೇವರ್ಗಿ ಪೊಲೀಸ್ ಠಾಣೆ ಮತ್ತು ಚಿಗರಳ್ಳಿ ಚೆಕ್ ಪೊಸ್ಟ್ ಗೆ ಭೇಟಿ ನೀಡಿ ಕಾನೂನು & ಸುವ್ಯವಸ್ಥೆ ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಉತ್ತಮ ಕರ್ತವ್ಯ ನಿರ್ವಹಿಸಲು ಸೂಕ್ತ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಶ್ರೀ ಅಡ್ಡೂರು ಶ್ರೀನಿವಾಸುಲು IPS, ಪೊಲೀಸ್ ಅಧೀಕ್ಷಕರು ಕಲಬುರಗಿ ಜಿಲ್ಲೆ ರವರು ಉಪಸ್ಥಿತರಿದ್ದರು.




ದಾವಣಗೆರೆ: ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ IPS ರವರು
ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊ೦ಡ ದಾವಣಗೆರೆ ಜಿಲ್ಲಾ ಮಾದಕ ದ್ರವ್ಯ ನಿಗ್ರಹ
ಪಡೆಯನ್ನು ರಚಿಸಿದ್ದು, ದಾವಣಗೆರೆ ಜಿಲ್ಲೆಯನ್ನು ಮಾದಕ ವ್ಯಸನಮುಕ್ತ ಜಿಲ್ಲೆಯನ್ನಾಗಿಸುವ
ಕಾರ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿರುತ್ತಾರೆ.
ದಿನಾಂಕ 07-08-2025 ರಂದು ಸಂಜೆ ಸಮಯದಲ್ಲಿ ದಾವಣಗೆರೆ ನಗರದ ಯರಗುಂಟಿ ಗ್ರಾಮದ ಸಮೀಪದ ಕೊಂಡಜ್ಜಿ ರಸ್ತೆಯ ಹತ್ತಿರದ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಯಾರೋ ಇಬ್ಬರು ಅಕ್ರಮವಾಗಿ ಗಾ೦ಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಶ್ರೀ ಸಾಗರ್ ಅಟ್ಟರ್ ವಾಲ್ PSI ಮಾದಕ ದ್ರವ್ಯ ನಿಗ್ರಹ ಪಡೆ ದಾವಣಗೆರೆ ಜಿಲ್ಲೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ IPS ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪರಮೇಶ್ವರ ಹೆಗಡೆ ರವರ ಹಾಗೂ ದಾವಣಗೆರೆ ನಗರ ಉಪ ವಿಭಾಗದ DYSP ರವರಾದ ಶ್ರೀ ಶರಣಬಸವೇಶ್ವರ ಬಿ ರವರ ಮಾರ್ಗದರ್ಶನದಲ್ಲಿ ಮತ್ತು ಪತ್ರಾಂಕಿತ ಅಧಿಕಾರಿಗಳು ಹಾಗೂ ಪಂಚರ ಉಪಸ್ಥಿತಿಯಲ್ಲಿ, ಜಿಲ್ಲಾ ಮಾದಕ ದ್ರವ್ಯ ನಿಗ್ರಹ ಪಡೆಯ PSI ಸಾಗರ್ ಅತ್ತರ್ ವಾಲ್ & ಸಿಬ್ಬಂದಿಗಳು ಹಾಗೂ ದಾವಣಗೆರೆ ನಗರ ಠಾಣೆಯ PSI ಶ್ರೀ ರವಿ
ನಾಯ್ಕ್, ಶ್ರೀಮತಿ ಲಲಿತಮ್ಮ ಹಾಗೂ ಸಿಬ್ಬಂದಿಗಳನ್ನೊಳಗೊ೦ಡ ತಂಡವು ಮೇಲ್ಕಂಡ ಸ್ವಳಕ್ಕೆ ದಾಳಿ
ಮಾಡಿ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದ ಆರೋಪಿತರಾದ 1) ದಸ್ತಗಿರಿ, 35 ವರ್ಷ ರಾಜೀವಗಾಂಧಿ ಬಡಾವಣೆ ದಾವಣಗೆರೆ ರವರುಗಳನ್ನು ಬಂಧಿಸಿದ್ದು ಆರೋಪಿತರಿಂದ ಮಾರಾಟ ಮಾಡಲು ತಮ್ಮ ಬಳಿ ಇದ್ದ ಬೈಕಿನಲ್ಲಿ ಇಟ್ಟುಕೊಂಡಿದ್ದ 1220 ಗ್ರಾಂ ಗಾಂಜಾ ಸೊಪ್ಪು 2) ಒಂದು ಹೊಂಡಾ, ಆಕ್ಟಿವಾ ಸೂಟರ್ ಅನ್ನು (ಅಂದಾಜು 2,00,000 ಮೌಲ್ಯದ ಸ್ವತ್ತು) ವಶಪಡಿಸಿಕೊಳ್ಳಲಾಗಿರುತ್ತದೆ.
ಸದರಿ ಕಾರ್ಯಚರಣೆಯಲ್ಲಿ ಶ್ರೀ ಜಿ ಮಂಜುನಾಥ ರವರ ಹಾಗೂ ದಾವಣಗೆರೆ ಗ್ರಾಮಾ೦ತರ ಉಪ ವಿಭಾಗದ DYSP ರವರಾದ ಬಸವರಾಜ್ ಬಿ ಎಸ್ ರವರು, ಮಾದಕ ದ್ರವ್ಯ ನಿಗ್ರಹ ಪಡೆಯ PSI ಶ್ರೀ ಸಾಗರ್ ಅತ್ತರ್ ವಾಲ್ & ಸಿಬ್ಬಂದಿಗಳಾದ ಪ್ರಕಾಶ್, ಮ೦ಜುನಾಥ, ಷಣ್ಮಖ, ಶಿವರಾಜ, ಗೋವಿಂದರಾಜ್, ಗಾಂಧಿನಗರ ಠಾಣೆಯ ಪಿ.ಎಸ್.ಐ ಶ್ರೀ ರವಿನಾಯ್ಕ್ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಪೂಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ IPS, ರವರು ಪ್ರಶಂಸಿಸಿದರು.

Our Nation is celebrating 79th Independence day. Indian Freedom Struggle was an inspiring journey for every citizen of India and it has been written in golden words in the history. The freedom we experience today is the courageous saga of sacrifices, relentless efforts, and unwavering determination of the freedom fighters of our land that induced the feeling of unity and strength among all the people of India.
25 Bn BSF is celebrating the Independence day with great enthusiasm & a ‘RUN FOR THE MARTYRS’ was conducted on 13 Aug 2025 at BSF Camp Chhawla to honour the sacrifices of those who fought for India’s freedom & made supreme sacrifice for the Nation while serving in BSF.
Total 160 Soldiers of BSF along with officers participated in the event. The ceremony ended with paying tribute to the Martyrs at ‘Shaheed Sthal’ at 25 Bn BSF.




ಕೊಡಗು: ಸೋಮವಾರಪೇಟೆಯ ಕುವೆಂಪು ಹೈಸ್ಕೂಲ್ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸೋಮವಾರಪೇಟೆ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಮಾದಕ ವಸ್ತು, ರಸ್ತೆ ಸಂಚಾರ ನಿಯಮಗಳು ಮತ್ತು ಸುರಕ್ಷತೆ, ಹಾಗೂ ಪೋಕ್ಸೋ ಮತ್ತಿತರ ಕಾಯ್ದೆಗಳ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಿದರು.


ವಿಜಯಪುರ: ತಾಳಿಕೋಟಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ರವರಿಂದ ಠಾಣೆಯ ಆವರಣದಲ್ಲಿ ಗಣೇಶ್ ಹಬ್ಬದ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಎಲ್ಲ ಸಮುದಾಯದ ಪ್ರಮುಖರನ್ನು ಆಹ್ವಾನಿಸಿ ಶಾಂತಿ ಸಭೆ ಏರ್ಪಡಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಹಬ್ಬಗಳನ್ನು ಶಾಂತ ರೀತಿಯಲ್ಲಿ ಆಚರಣೆ ಮಾಡಲು ಸೂಚಿಸಲಾಯಿತು.



ಮುಧೋಳ: ದಿನಾ೦ಕ. 18-08-2025 ರಂದು ಮಾನ್ಯ ಪೊಲೀಸ್ ಅಧೀಕ್ಷಕರು
ಬಾಗಲಕೋಟ ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು. ಬಾಗಲಕೋಟ 1&2
ಮಾನ್ಯ ಡಿ.ಎಸ್.ಪಿ ಸಾಹೇಬರು ಜಮಖಂಡಿರವರ ಮಾರ್ಗದರ್ಶನದಲ್ಲಿ 1] ಶ್ರೀ ಎಮ್ ಎನ್
ಶಿರಹಣ್ಣ ಸಿಪಿಐ ಮುಧೋಳ, ೨.ಅಜಿತಕುಮಾರ ಹೊಸಮನಿ ಪಿ.ಎಸ್.ಐ ಮುಧೋಳ (ಎಲ್
& ಓ) ನೇತೃತ್ವದಲ್ಲಿ ಸಿಬ್ಬಂದಿಗಳಾದ 1. ಆರ್ ಚ ಕಟಗೇರಿ. 2. ಬಿ ಡಿ ಕುಠಿ 3. ಎಚ್ ಜಿ
ಮಾದರ 4. ಎಮ್ ಬಿ ದಳವಾಯಿ 5. ಎಮ್ ಎಲ್ ಒಡೆಯರ ಇವರುಗಳು ಮುಧೋಳ
ಪೊಲೀಸ್ ಠಾಣೆಯ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಳೆದು ಹೋದ 19 ಮೊಬೈಲಗಳನ್ನು
ಸಿಇಐಆರ್ ಪೋರ್ಟಲದಲ್ಲಿ ಪತ್ತೆ ಮಾಡಿ ವಾರಸುದಾರರಿಗೆ ಮರಳಿ ಕೊಟ್ಟಿರುತ್ತಾರೆ.


