ಭಟ್ಕಳದ ಎ .ಕೆ ಹಫೀಜ್ಕಾ ಮೆಮೋರಿಯಲ್ ಹಾಲ್ ನಲ್ಲಿ ಭಟ್ಕಳ ಉಪವಿಭಾಗದ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಮಾನಸಿಕ ಮತ್ತು ದೈಹಿಕ ಸದೃಢತೆ ಹಾಗೂ ಒತ್ತಡ ನಿರ್ವಹಣೆಗಾಗಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಉಪನ್ಯಾಸಕಾರಾಗಿ ಪ್ರೋ. ಶ್ರೀ ಪ್ರವೀಣ ವಿ.ಜಿ ರವರು ಹಾಜರಿದ್ದರು.



ಭಟ್ಕಳದ ಎ .ಕೆ ಹಫೀಜ್ಕಾ ಮೆಮೋರಿಯಲ್ ಹಾಲ್ ನಲ್ಲಿ ಭಟ್ಕಳ ಉಪವಿಭಾಗದ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಮಾನಸಿಕ ಮತ್ತು ದೈಹಿಕ ಸದೃಢತೆ ಹಾಗೂ ಒತ್ತಡ ನಿರ್ವಹಣೆಗಾಗಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಉಪನ್ಯಾಸಕಾರಾಗಿ ಪ್ರೋ. ಶ್ರೀ ಪ್ರವೀಣ ವಿ.ಜಿ ರವರು ಹಾಜರಿದ್ದರು.



ಗಣೇಶ್ 13 ನೇ ದಿನದ ವಿಸರ್ಜನೆ ಅಂಗವಾಗಿ ಕೊಪ್ಪಳ ನಗರದಲ್ಲಿ ಡಿ ಎಸ್ ಪಿ ಕೊಪ್ಪಳ ರವರಿಂದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ರೋಲ್ ಕಾಲ್ ತೆಗೆದುಕೊಂಡು ಸೂಕ್ತವಾಗಿ ಬಂದೋಬಸ್ತ್ ಕರ್ತವ್ಯವನ್ನು ನಿರ್ವಹಿಸಲು ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಯಿತು.



ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಖ್ರಿ ಸರ್ಕಲ್‌ಗೆ ಭೇಟಿ ನೀಡಿ, ಅಲ್ಲಿನ ಪೀಕ್-ಅವರ್ ಸಂಚಾರ ದಟ್ಟಣೆಯ ಸ್ಥಿತಿ-ಗತಿಯನ್ನು ಪರಿಶೀಲಿಸಲಾಯಿತು. ಮತ್ತು ಸ್ಥಳೀಯ ಟ್ರಾಫಿಕ್ ತಂಡದೊಂದಿಗೆ ಚರ್ಚಿಸಿ, ದಟ್ಟಣೆಯನ್ನು ತಗ್ಗಿಸಲು ಮತ್ತು ಪ್ರಯಾಣಿಕರಿಗೆ ಸುಗಮ ಸಂಚಾರವನ್ನು ಖಚಿತಪಡಿಸಲು ಕ್ರಮಗಳನ್ನು ಚರ್ಚಿಸಲಾಯಿತು.

ಶ್ರೀ ಗಣೇಶ ಹಬ್ಬದ ಪ್ರಯುಕ್ತ ಮೇಲ್ವಿಚಾರಣೆ ಸಲುವಾಗಿ ಬೀದರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಗೆ ಹಿರಿಯ ಅಧಿಕಾರಿಗಳ ಭೇಟಿ, ಅಧಿಕಾರಿ ಮತ್ತು ಸಿಬ್ಬಂದಿ ರವರಿಗೆ ಸಲಹೆ ಸೂಚನೆಗಳು.
ಸನ್ಮಾನ್ಯ ಶ್ರೀ ಎನ್ ಸತೀಶ್ ಕುಮಾರ, ಐ.ಪಿ.ಎಸ್, ಮಾನ್ಯ ಪೊಲೀಸ್ ಮಹಾನೀರಿಕ್ಷಕರು, ಕೇಂದ್ರ ಸ್ಥಾನ-01, ಕೇಂದ್ರ ಕಛೇರಿ ಬೆಂಗಳೂರು ರವರು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಗೆ ಭೇಟಿ ನೀಡಿ, ಶ್ರೀ ಗಣೇಶ ಹಬ್ಬದ ನಿಮಿತ್ಯ ಬಂದೋಬಸ್ತ ಕೈಕೊಂಡ ಯೋಜನೆಗಳ ಮತ್ತು ಬ/ಬ ಕರ್ತವ್ಯದ ಪ್ರಗತಿ ಪರಿಶೀಲನೆ ನಡೆಸಿ, ಬಂದೋಬಸ್ತ ವಿಷಯಗಳ ಬಗ್ಗೆ ಚರ್ಚಸಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹೊಗುವಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ನಂತರ ಕಛೇರಿಯಲ್ಲಿಅಳವಡಿಸಿರುವ AI CCTV COMMAND & CONTROL CENTRE ಗೆ ಭೇಟಿ ನೀಡಿ ವಿಕ್ಷಣೆ ಮಾಡಿ ಪ್ರಶಂಸಿಸಿರುತ್ತಾರೆ.
ಮಾನ್ಯರು ಶ್ರೀ ಗಣೇಶ ಹಬ್ಬದ ಬಂದೋಬಸ್ತ ಕುರಿತು ತಮ್ಮ ಅಮೂಲ್ಯವಾದ ಸಲಹೆ ಮತ್ತು ಸೂಚನೆಗಳನ್ನು ನೀಡಿದ್ದು, ಮಾನ್ಯರ ಸಲಹೆ ಮತ್ತು ಸೂಚನೆಗಳನ್ನು ತಪ್ಪದೇ ಪಾಲನೆ ಮಾಡಲಾಗುವುದು. ಮಾನ್ಯರು ಜಿಲ್ಲಾ ಪೊಲೀಸ್ ಕಛೇರಿಗೆ ಭೇಟಿ ನೀಡಿದಕ್ಕೆ ಸಮಸ್ತ ಜಿಲ್ಲಾ ಪೊಲೀಸರಿಂದ ಧನ್ಯವಾದಗಳು.


ಕೃಷ್ಣರಾಜ ಉಪ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶಗಳಲ್ಲಿ ಗಣೇಶ ಹಬ್ಬದ ಪ್ರಯುಕ್ತ ನಗರದ ವಿವಿಧ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪಿಸಿದ್ದು, ಈ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಕಾಲ್ನಡಿಗೆ ಮೂಲಕ ವಿಶೇಷ ಗಸ್ತು ಮಾಡಿರುತ್ತಾರೆ.




ತಿಪಟೂರು ನಗರದಲ್ಲಿ ಗಣಪತಿ ವಿಸರ್ಜನಾ ಕಾರ್ಯಕ್ರಮ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪುರುಷೋತ್ತಮ್ ಎಂ.ಎಲ್ ಹಾಗೂ ಎ.ಎಸ್.ಪಿ ತಿಪಟೂರು ರವರ ಸಮ್ಮುಖದಲ್ಲಿ ಸೌಹಾರ್ದ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಶಾಸಕರಾದ ಶ್ರೀ ಷಡಕ್ಷರಿ ರವರು ಮತ್ತು ಎ.ಸಿ ತಿಪಟೂರು ರವರು ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.



ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕಂಬದಕೋಣೆ ಇಲ್ಲಿನ ವಿದ್ಯಾರ್ಥಿಗಳಿಗೆ ಮಾದಕ ದೃವ್ಯ ಜಾಗೃತಿ ಸಭೆ ಹಾಗೂ ವಿದ್ಯಾರ್ಥಿಗಳ ಡ್ರಗ್ಸ್ ಕಮಿಟಿ ಸಭೆ ನಡೆಸಿ ವಿದ್ಯಾರ್ಥಿಗಳಿಗೆ ಮಾದಕ ದೃವ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಲಾಯಿತು.

ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ರಾಜಾಜಿನಗರದ ವಿದ್ಯಾರ್ಥಿಗಳು ಸಂಚಾರ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ, ಬೆಂಗಳೂರು ನಗರದ ಸಂಚಾರ ನಿರ್ವಹಣಾ ಕೇಂದ್ರದ ಅಸಿಸ್ಟಂಟ್ ಪೊಲೀಸ್ ಸಬ್-ಇನ್ಸ್ಪೆಕ್ಟರ್ ರವರು , ಸಂಚಾರ ನಿಯಮಗಳು ಮತ್ತು ಅಳವಡಿಸಿಕೊಳ್ಳಬೇಕಾದ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.


ದೇವರಾಜ ಉಪವಿಭಾಗ & ನರಸಿಂಹರಾಜ ಉಪವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶಗಳಲ್ಲಿ ಗಣೇಶ ಹಬ್ಬದ ಪ್ರಯುಕ್ತ ನಗರದ ವಿವಿಧ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪಿಸಿದ್ದು, ಈ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾವಹಿಸಲು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಕಾಲ್ನಡಿಗೆ ಮೂಲಕ ವಿಶೇಷ ಗಸ್ತು ಮಾಡಿರುತ್ತಾರೆ.


