ಗದಗ್ ಜಿಲ್ಲೆಯಲ್ಲಿ ವಾರದ ಕವಾಯತು

0

ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮಲ್ಲಸಮುದ್ರದ ಕವಾಯತು ಮೈದಾನದಲ್ಲಿ ವಾರದ ಕವಾಯತು ನಡೆಸಿ, ಗೌರವ ವಂದನೆ ಸ್ವೀಕರಿಸಿ, ತುಕಡಿಗಳ ಪರಿವೀಕ್ಷಣೆ ಮಾಡಲಾಯಿತು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿರವರಿಗೆ ಪ್ರಶಂಸನಾ ಪತ್ರ ನೀಡಿ ಉತ್ತಮ ಕಾರ್ಯಗಳನ್ನು ಶ್ಲಾಘಿಸಲಾಯಿತು ಈ ಕಾಲಕ್ಕೆ ಅಧಿಕಾರಿ ಮತ್ತು ಸಿಬ್ಬಂದಿರವರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಯಿತು ಇದೇ ಸಂದರ್ಭದಲ್ಲಿ , ನಗದು ಹೊಂದಿರುವ ಬ್ಯಾಗ್‌ನ್ನು ಪ್ರಯಾಣಿಕರಿಗೆ ಸುರಕ್ಷಿತವಾಗಿ ತಲುಪಿಸಿ ನಾಗರಿಕ ಪ್ರಜ್ಞೆಯನ್ನು ಮೆರೆದ ಆಟೋ ಚಾಲಕ ಶ್ರೀ ಸೈಯದ್ ಹುಸೇನ್ ಮುಲ್ಲಾ ರವರಿಗೆ “ಸಮುದಾಯ ರಕ್ಷಕ ಪ್ರಶಂಸನಾ ಪತ್ರ” ನೀಡಿ ಗೌರವಿಸಲಾಯಿತು.

ಕೋಲಾರದಲ್ಲಿ ಪೊಲೀಸ್ ತಪಾಸಣೆ

0

ಕೋಲಾರ ಜಿಲ್ಲಾ ಪೊಲೀಸ್‌ ವತಿಯಿಂದ ಪ್ರತಿ ದಿನ ಅಧಿಕಾರಿ ಸಿಬ್ಬಂದಿಗಳು ಅಪರಾಧ ತಡೆಯುವ ನಿಟ್ಟಿನಲ್ಲಿ ದೈನಂದಿನ ಕರ್ತವ್ಯದೊಂದಿಗೆ ನಗರದಲ್ಲಿ ರಾತ್ರಿ ವಿಷೇಶ ಗಸ್ತು ಕರ್ತವ್ಯವನ್ನು ಕೈಗೊಂಡು ಪ್ರಮುಖ ಸಾರ್ವಜನಿಕ ಸ್ಥಳಗಲಾದ ದೇವಸ್ಥಾನ, ಮಸೀದಿ, ಬಸ್ ನಿಲ್ದಾಣ, ಲಾಡ್ಜ್ ಗಳಿಗೆ ಭೇಟಿ ನೀಡಿ ಹಾಗೂ ಸಂಶಯಾಸ್ಪದ ವ್ಯಕ್ತಿಗಳನ್ನು ಮತ್ತು ATM, ಮತ್ತು ವಾಹನಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಕೋಲಾರ ಪೋಲೀಸರಿಂದ : ಕಳೆದುಕೊಂಡ ಮೊಬೈಲ್‌ಗಳು ಮಾಲೀಕರಿಗೆ ವಾಪಸ್

0

ಕೋಲಾರ ಜಿಲ್ಲೆಯ ಕೋಲಾರ ನಗರ, ಸೆನ್ ಮತ್ತು ಮಾಲೂರು ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳು ಕಳುವಾಗಿರುವ ಬಗ್ಗೆ ದೂರು ನೀಡಿದ್ದು ಅದರಂತೆ ಸಿ. ಇ. ಐ.ಅರ್ ಪೋರ್ಟೆಲ್ ಮೂಲಕ ಕಳುವಾಗಿದ್ದ ಮೊಬೈಲ್ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ಹಸ್ತಾಂತರಿಸಲಾಯಿತು.

ತುಮಕೂರು ಪೊಲೀಸರಿಂದ “ತೆರೆದ ಮನೆ” ಕಾರ್ಯಕ್ರಮ

0

ಮಹಿಳಾ ಪೊಲೀಸ್ ಠಾಣೆಗೆ ಶಾಲಾ ಮಕ್ಕಳನ್ನು ಬರಮಾಡಿಕೊಂಡು “ತೆರೆದ ಮನೆ” ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳಿಗೆ ಪೊಲೀಸ್ ಠಾಣೆಯ ದೈನಂದಿನ ಕರ್ತವ್ಯ , ಪೊಲೀಸರ ಕಾರ್ಯವೈಕರಿ ಹಾಗೂ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಯಿತು.

ಗದಗ ಜಿಲ್ಲಾ ಸಂಚಾರ ಪೊಲೀಸರಿಂದ ವಿಶೇಷ ಕಾರ್ಯಾಚರಣೆ

0

ದಿನಾಂಕ:06-08-2025ರಂದು ಗದಗ ಜಿಲ್ಲಾ ಪೊಲೀಸ್ ವತಿಯಿಂದ ಗದಗ-ಬೆಟಗೇರಿ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿರವರು ಗದಗ ನಗರದಲ್ಲಿ ವಿಶೇಷ ಕಾರ್ಯಚರಣೆ ಮಾಡಿ ದೋಷಪೂರ್ಣ ನಂಬರ್ ಪ್ಲೇಟ್ (Defective Number Plate) ಹೊಂದಿರುವ ಒಟ್ಟು 56 ಬೈಕ್ ಗಳನ್ನು ಸೀಜ್ ಮಾಡಿದ್ದು, ಅದರಲ್ಲಿ 37 ಬೈಕ್ ಗಳ ಮೇಲೆ 18500/- ರೂ ದಂಡವನ್ನು, 26 ಬೈಕ್ ಗಳ ಮೇಲೆ 14500/- ರೂ ಥರ್ಡ್-ಐ ದಂಡವನ್ನು ಉಳಿದಂತೆ 20 ಬೈಕ್ ಗಳ ಮೇಲೆ ಕಾನೂನು ರೀತಿ ದಂಡವನ್ನು ವಿಧಿಸಲಾಗಿರುತ್ತದೆ.

ಮುಧೋಳ ಪೊಲೀಸರಿಂದ ವಿದ್ಯಾರ್ಥಿಗಳಿಗೆ ಕಾನೂನು ಜಾಗೃತಿ ಕಾರ್ಯಕ್ರಮ

0

ಮುಧೋಳ ಪೊಲೀಸ್ ಠಾಣೆಯಲ್ಲಿ ‘ತೆರೆದ ಬಾಗಿಲು’ ಕಾರ್ಯಕ್ರಮದ ಅಂಗವಾಗಿ ರನ್ನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮೂಡಿಸಲಾಯಿತು.

ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವಾರದ ಕವಾಯತು

0

ಚಿಕ್ಕಮಗಳೂರು ಜಿಲ್ಲೆಯ ಕೇಂದ್ರ ಸ್ಥಾನದಲ್ಲಿರುವ ಪೊಲೀಸ್ ಕವಾಯತು ಮೈದಾನದಲ್ಲಿ ಚಿಕ್ಕಮಗಳೂರು ಮತ್ತು ತರೀಕೆರೆ ಉಪವಿಭಾಗದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಹಾಗೂ ಕೊಪ್ಪದಲ್ಲಿ ಕೊಪ್ಪ ಉಪವಿಭಾಗದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಇಂದು ವಾರದ ಕವಾಯತು ನಡೆಸಲಾಯಿತು. ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಶಿಸ್ತು ಮತ್ತು ಆರೋಗ್ಯ ಕಾಪಾಡಿಕೊಳ್ಳಲು, ಪ್ರಾಮಾಣಿಕ ಕರ್ತವ್ಯ ನಿರ್ವಹಣೆ, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸೂಕ್ತ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು.

ಗದಗ್ ಪೊಲೀಸ್ : “ಪೊಲೀಸ್ ಅಂದರೆ ಭಯವಲ್ಲ, ಭರವಸೆ”

0

“ಪೊಲೀಸ್ ಅಂದರೆ ಭಯವಲ್ಲ, ಭರವಸೆ” ಎಂಬ ಸಂದೇಶದೊಂದಿಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದ ತೆರೆದ ಮನೆ ಕಾರ್ಯಕ್ರಮದ ಅಂಗವಾಗಿ, ಶಾಲಾ ಮಕ್ಕಳಿಗೆ ಪೊಲೀಸ್‌ ಜೊತೆ ಸಂವಹನ ಮತ್ತು ಸಹಕಾರ, 112 ತುರ್ತು ಸಹಾಯವಾಣಿ, 1930 ಸೈಬರ್ ಅಪರಾಧ ಸಹಾಯವಾಣಿ, 1098 ಮಕ್ಕಳ ಸಹಾಯವಾಣಿ, ಪೋಕ್ಸೋ ಕಾಯ್ದೆಯ ಕುರಿತು, ಸಾಮಾನ್ಯ ಕಾನೂನು ಹಾಗೂ ಠಾಣೆಯ ಕಾರ್ಯವೈಖರಿ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಚಾಮರಾಜನಗರ ಜಿಲ್ಲಿಯಲ್ಲಿ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮ

0

“ಮನೆ ಮನೆಗೆ ಪೊಲೀಸ್” ಎಂಬ ವಿನೂತನ ಕಾರ್ಯಕ್ರಮದ ಅಂಗವಾಗಿ ಇಂದು ರಾಮಾಪುರ, ಹನೂರು, ಕೊಳ್ಳೇಗಾಲ ಪಟ್ಟಣ, ಯಳಂದೂರು ಹಾಗೂ ತೆರಕಣಾಂಬಿ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಸುರಕ್ಷತೆ, ಭದ್ರತೆ, ಕಾನೂನು ಸುವ್ಯವಸ್ಥೆ, ಅಪರಾಧ ತಡೆ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಸಾರ್ವಜನಿಕರಿಂದ ಇಲಾಖೆಗೆ ಸಂಬಂಧಿಸಿದ ಅಹವಾಲು ಮತ್ತು ಸಲಹೆಗಳ ಕುರಿತು ಚರ್ಚಿಸಲಾಯಿತು.

ಬೆಳಗಾವಿ ಪೊಲೀಸ್ : ಕಳೆದುಕೊಂಡ ಮೊಬೈಲ್‌ಗಳು ಮಾಲೀಕರಿಗೆ ವಾಪಸ್

0

CIIR (Central equipment Identity Register) ಆ್ಯಪ್‌ ಮುಖಾಂತರ 16
ಮೋಬೈಲ್‌ಗಳನ್ನು ಪತ್ತೆ ಮಾಡಿದ ಬೆಳಗಾವಿ ನಗರ ಸೈಬರ್‌ ಠಾಣೆ ಪೊಅಸ್‌ರು.
ಬೆಳಗಾವಿ ನಗರದ ಸಿಇಎನ್‌ ಪೊಅಸ್‌ ಠಾಣೆಯ ಎಸಿಪಿ ರಘು ಜೆ ನೇತೃತ್ವದಲ್ಲಿ ಕಳೆದ ಮಾರ್ಚದಿಂದ
ಇಲ್ಲಿಯವರೆಗೆ ಒಟ್ಟು 116 ಕಳುವಾದ ಮೋಬೈಲ್‌ಗಳನ್ನು ಇದೇ ಆ್ಯಪ್‌ ಬಳಸಿ ಪತ್ತೆ ಹಚ್ಚಿದ್ದು, ಇಂದು ಬೆಳಗಾವಿ
ನಗರದ ಪೊಲೀಸ್‌ ಆಯುಕ್ತರು ಸಾಂಕೇತಿಕವಾಗಿ 10 ಜನ ಮೋಬೈಲ್‌ ಮಾಲೀಕರಿಗೆ ಅವರ ಮೊಬೈಲುಗಳನ್ನು
ಮರಳಿ ನೀಡಿರುತ್ತಾರೆ.

KSP (Karnataka State Police) mobile application E-Lost ಹಾಗೂ CIIR (Central
equipment Identity Register) ಸರ್ಕಾರಿ ಆ್ಯಪಗಳ (App) ಮುಖಾ೦ತರ ದಾಖಲಾದ ಡಿಜಟಲ್‌ ದಾಖಲೆ
ಮೂಲಕ ಮೋಟ್ಯಲ್‌ಗಳನ್ನು ಪತ್ತೆ ಹಚ್ಚಲಾಗುತ್ತದೆ.

ಸಾರ್ವಜನಿಕರು ಮೊಬೈಲ್ ಕಳೆದಾಗ ಅಥವಾ ಕಳುವಾದಾಗ ಪೊಲೀಸ್ ಠಾಣಿಗೆ ಅಥವಾ ಮೇಲಿನ
E-lost ಹಾಗೂ CIIR App ದಲ್ಲಿ ದೂರು ದಾಖಲಸಿ, ಮೋಖ್ಯೆಲ್‌ ಖರೀದಿಸಿ ಬಿಲ್ಲು ಹಾಗೂ ಇನ್ನ
ಗುರುತಿನ ಚೀಟಿಯನ್ನು ಅಪ್‌ಲೋಡ್‌ ಮಾಡಿ Ticket ID ಪಡೆದುಕೊಳ್ಳುವುದು. ನ೦ತರ ಪೊಲೀಸ್
ತನಿಖಾ ಪ್ರಕ್ರಿಯೆಯಲ್ಲಿ ನಿಮ್ಮ ಮೋಖ್ಯೆಲ್‌ ಪತ್ತೆಯಾದಾಗ “Your mobile has been traced”
ಸಂದೇಶ ನಿಮಗೆ ಬರುತ್ತದೆ. ಆಗ ನೀವು ಸಿಇಎನ್‌ (ಸೈಬರ್‌) ಪೊಅಸ್‌ ಠಾಣಿಗೆ ನಿಮ್ಮ
ದಾಖಲಾತಿಗಳೊಂದಿಗೆ ತೆರಳಿ, ಪತ್ತೆಯಾದ ನಿಮ್ಮ ಮೋಖ್ಯೆಲ್‌ಗಳನ್ನು ಮರಳಿ ಪಡೆದುಕೊಳ್ಳಬಹುದಾಗಿದೆ.