ಚಾಮರಾಜನಗರ ಜಿಲ್ಲಿಯಲ್ಲಿ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮ

“ಮನೆ ಮನೆಗೆ ಪೊಲೀಸ್” ಎಂಬ ವಿನೂತನ ಕಾರ್ಯಕ್ರಮದ ಅಂಗವಾಗಿ ಇಂದು ರಾಮಾಪುರ, ಹನೂರು, ಕೊಳ್ಳೇಗಾಲ ಪಟ್ಟಣ, ಯಳಂದೂರು ಹಾಗೂ ತೆರಕಣಾಂಬಿ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಸುರಕ್ಷತೆ, ಭದ್ರತೆ, ಕಾನೂನು ಸುವ್ಯವಸ್ಥೆ, ಅಪರಾಧ ತಡೆ ಮುಂತಾದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಸಾರ್ವಜನಿಕರಿಂದ ಇಲಾಖೆಗೆ ಸಂಬಂಧಿಸಿದ ಅಹವಾಲು ಮತ್ತು ಸಲಹೆಗಳ ಕುರಿತು ಚರ್ಚಿಸಲಾಯಿತು.

ಬೆಳಗಾವಿ ಪೊಲೀಸ್ : ಕಳೆದುಕೊಂಡ ಮೊಬೈಲ್‌ಗಳು ಮಾಲೀಕರಿಗೆ ವಾಪಸ್

CIIR (Central equipment Identity Register) ಆ್ಯಪ್‌ ಮುಖಾಂತರ 16
ಮೋಬೈಲ್‌ಗಳನ್ನು ಪತ್ತೆ ಮಾಡಿದ ಬೆಳಗಾವಿ ನಗರ ಸೈಬರ್‌ ಠಾಣೆ ಪೊಅಸ್‌ರು.
ಬೆಳಗಾವಿ ನಗರದ ಸಿಇಎನ್‌ ಪೊಅಸ್‌ ಠಾಣೆಯ ಎಸಿಪಿ ರಘು ಜೆ ನೇತೃತ್ವದಲ್ಲಿ ಕಳೆದ ಮಾರ್ಚದಿಂದ
ಇಲ್ಲಿಯವರೆಗೆ ಒಟ್ಟು 116 ಕಳುವಾದ ಮೋಬೈಲ್‌ಗಳನ್ನು ಇದೇ ಆ್ಯಪ್‌ ಬಳಸಿ ಪತ್ತೆ ಹಚ್ಚಿದ್ದು, ಇಂದು ಬೆಳಗಾವಿ
ನಗರದ ಪೊಲೀಸ್‌ ಆಯುಕ್ತರು ಸಾಂಕೇತಿಕವಾಗಿ 10 ಜನ ಮೋಬೈಲ್‌ ಮಾಲೀಕರಿಗೆ ಅವರ ಮೊಬೈಲುಗಳನ್ನು
ಮರಳಿ ನೀಡಿರುತ್ತಾರೆ.

KSP (Karnataka State Police) mobile application E-Lost ಹಾಗೂ CIIR (Central
equipment Identity Register) ಸರ್ಕಾರಿ ಆ್ಯಪಗಳ (App) ಮುಖಾ೦ತರ ದಾಖಲಾದ ಡಿಜಟಲ್‌ ದಾಖಲೆ
ಮೂಲಕ ಮೋಟ್ಯಲ್‌ಗಳನ್ನು ಪತ್ತೆ ಹಚ್ಚಲಾಗುತ್ತದೆ.

ಸಾರ್ವಜನಿಕರು ಮೊಬೈಲ್ ಕಳೆದಾಗ ಅಥವಾ ಕಳುವಾದಾಗ ಪೊಲೀಸ್ ಠಾಣಿಗೆ ಅಥವಾ ಮೇಲಿನ
E-lost ಹಾಗೂ CIIR App ದಲ್ಲಿ ದೂರು ದಾಖಲಸಿ, ಮೋಖ್ಯೆಲ್‌ ಖರೀದಿಸಿ ಬಿಲ್ಲು ಹಾಗೂ ಇನ್ನ
ಗುರುತಿನ ಚೀಟಿಯನ್ನು ಅಪ್‌ಲೋಡ್‌ ಮಾಡಿ Ticket ID ಪಡೆದುಕೊಳ್ಳುವುದು. ನ೦ತರ ಪೊಲೀಸ್
ತನಿಖಾ ಪ್ರಕ್ರಿಯೆಯಲ್ಲಿ ನಿಮ್ಮ ಮೋಖ್ಯೆಲ್‌ ಪತ್ತೆಯಾದಾಗ “Your mobile has been traced”
ಸಂದೇಶ ನಿಮಗೆ ಬರುತ್ತದೆ. ಆಗ ನೀವು ಸಿಇಎನ್‌ (ಸೈಬರ್‌) ಪೊಅಸ್‌ ಠಾಣಿಗೆ ನಿಮ್ಮ
ದಾಖಲಾತಿಗಳೊಂದಿಗೆ ತೆರಳಿ, ಪತ್ತೆಯಾದ ನಿಮ್ಮ ಮೋಖ್ಯೆಲ್‌ಗಳನ್ನು ಮರಳಿ ಪಡೆದುಕೊಳ್ಳಬಹುದಾಗಿದೆ.

ಮೈಸೂರಿನಲ್ಲಿ ಪೊಲೀಸ್ ತಪಾಸಣೆ

ರಾತ್ರಿ ಮಂಡಿ & ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ IPS, ರವರ ನೇತೃತ್ವದಲ್ಲಿ ಉಪ ಪೊಲೀಸ್ ಆಯುಕ್ತರುಗಳಾದ ಕುಮಾರಿ ಬಿಂದು ಮಣಿ RN IPS, ಕಾನೂನು ಮತ್ತು ಸುವ್ಯವಸ್ಥೆ, ಶ್ರೀ ಸುಂದರ್ ರಾಜ್ KS ಅಪರಾಧ ಮತ್ತು ಸಂಚಾರ, ಕಮಾಂಡೋ ಪಡೆ ಮತ್ತು ಅಧಿಕಾರ ಸಿಬ್ಬಂದಿಗಳೊಂದಿಗೆ ಕಾಲ್ನಡಿಗೆ ಮೂಲಕ ಗಸ್ತು ಮಾಡಿ ಅನುಮಾನಾಸ್ಪದ ವಾಹನಗಳು ವ್ಯಕ್ತಿಗಳು ಮತ್ತು ಅಂಗಡಿಗಳನ್ನು ತಪಾಸಣೆ ಮಾಡಿದರು.

ಧರ್ಮಸ್ಥಳ ಗುಂಪು ಘರ್ಷಣೆ: ವರದಿ ನೀಡಲು ಸೂಚನೆ

ಬೆಂಗಳೂರು :- ಧರ್ಮಸ್ಥಳದಲ್ಲಿ ನಿನ್ನೆ ದಿನ ಎರಡು ಗುಂಪುಗಳ ಮಧ್ಯೆ ಗುಂಪು ಘರ್ಷಣೆ ಯಾಕಾಗಿದೆ, ಯಾರು ಕಾರಣಕರ್ತರು, ಎರಡು ಗುಂಪಿನ ಉದ್ದೇಶ ಏನಿದೆ ಎಂಬುದರ ಕುರಿತು ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಹೇಳಿದರು.

ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿನ ಜನಸಮುದಾಯ ಎಸ್‌ಐಟಿ ಮಾಡಲು ಒತ್ತಾಯಿಸಿದ್ದರು. ಬಹಳ ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ಎಸ್‌ಐಟಿ ರಚಿಸಿದ್ದೇವೆ. ಅನಾಮಿಕ ವ್ಯಕ್ತಿ ಇಲ್ಲಿ ಕೊಲೆಯಾಗಿದೆ, ನಾನೇ ಅನೇಕ ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೆ ನೀಡಿದ್ದ. ಆ ವ್ಯಕ್ತಿ, ಮ್ಯಾಜಿಸ್ಟ್ರೇಟರ್ ಮುಂದೆ 164 ಹೇಳಿಕೆ ನೀಡಿದ್ದ. ಆತನ ಹೇಳಿಕೆ ಆಧರಿಸಿ ತನಿಖೆ ಮಾಡಬೇಕು ಎಂದು ಮ್ಯಾಜಿಸ್ಟ್ರೀಯಲ್ ಸೂಚನೆಯೂ ಇತ್ತು. ನಾವು ಕೂಡ ಸಾರ್ವಜನಿಕವಾಗಿ ಗಂಭೀರವಾಗಿ ಪರಿಗಣಿಸಿ ಎಸ್‌ಐಟಿ ಮಾಡಿದ್ದೇವೆ ಎಂದು ತಿಳಿಸಿದರು.

ಧರ್ಮಸ್ಥಳದಲ್ಲಿ 13 ಸ್ಥಳಗಳಲ್ಲಿ ಹೆಣಗಳನ್ನು ಹೂತುಹಾಕಿದ್ದೇನೆ ಎಂದು ಹೇಳಿಕೆ ಇತ್ತು. ಅದರ ಪ್ರಕಾರ 13 ಸ್ಥಳಗಳನ್ನು ತೆಗೆದಿದ್ದಾರೆ. 6ನೇ ಸ್ಥಳದಲ್ಲಿ ಗಂಡಸಿನ ಅಸ್ಥಿಪಂಜರ ಸಿಕ್ಕಿರುವ ಬಗ್ಗೆ ನೀವೆಲ್ಲ ವರದಿ ಮಾಡಿದ್ದೀರಿ. 13ನೇ ಸ್ಥಳಕ್ಕೆ ಹೋದಾಗ ಏನು ಸಿಕ್ಕಿಲ್ಲ. ಇದರ ಹೊರತುಪಡಿಸಿ ಗುಡ್ಡದಲ್ಲಿ ಒಂದಷ್ಟು ಮೂಳೆಗಳು ಸಿಕ್ಕಿದ್ದು, ಎಫ್‌ಎಸ್‌ಎಲ್ ಗೆ ಕಳಿಸುವ ಕೆಲಸ ಎಸ್‌ಐಟಿ ಮಾಡಿದೆ ಎಂದರು..

ಇದರ ಹಿನ್ನೆಲೆಯಲ್ಲಿ ಅಥವಾ ಸಂಬಂಧಪಟ್ಟಂತೆ ಎರಡು ಗುಂಪುಗಳ ಮಧ್ಯೆ ನಿನ್ನೆ ದಿನ ಘರ್ಷಣೆಯಾಗಿದೆ. ದೂರು, ಪ್ರತಿದೂರು ಕೊಟ್ಟಿದ್ದಾರೆ. ಏಫ್‌ಐಆರ್ ದಾಖಲಿಸುವಂತೆ ಸೂಚಿಸಲಾಗಿದೆ. ಅದನ್ನ ತನಿಖೆ ಮಾಡುತ್ತಾರೆ. ಯಾವ ರೀತಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಎಸ್‌ಐಟಿ ಹಾಗೂ ಸ್ಥಳೀಯ ಪೊಲೀಸರು ಮಾಡುತ್ತಾರೆ ಎಂದು ತಿಳಿಸಿದರು.

ಧರ್ಮಸ್ಥಳದ ವಿಚಾರದಲ್ಲಿ ಯಾರೋ ಹೇಳಿಕೆ ಕೊಡುತ್ತಾರೆ ಅದು ನಮಗೆ ಮುಖ್ಯವಲ್ಲ. ಎಸ್‌ಐಟಿಯವರು ತನಿಖೆಯನ್ನು ತಾಂತ್ರಿಕವಾಗಿ ಮತ್ತು ಆಧುನಿಕವಾಗಿ ಸತ್ಯ ಹೊರಗೆ ಬರುವ ರೀತಿಯಲ್ಲಿ ಮಾಡಬೇಕು. ಆ ಕೆಲಸವನ್ನು ಎಸ್‌ಐಟಿ ಮಾಡುತ್ತದೆ. ಅವರನ್ನು ಈಗಲೇ ಪ್ರಶ್ನೆ ಮಾಡಿದರೆ ತನಿಖೆಗೆ ಅರ್ಥ ಬರುವುದಿಲ್ಲ.

ಎಸ್‌ಐಟಿ ಸರಿಯಾಗಿ ತನಿಖೆ ಮಾಡುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಸೆಇಯಾಗು ತನಿಖೆ ಆಗುತ್ತಿಲ್ಲ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಇವರೆ ಎಲ್ಲ ಸಲಹೆ ಕೊಡುತ್ತಾರೆ. ರೆಡಾರ್ ತರಬೇಕು ಎನ್ನುತ್ತಿದ್ದಾರೆ. ಅವರು ಹೇಳಿದ ರೀತಿ ತನಿಖೆ ಮಾಡಲು ಆಗುತ್ತದೆಯೇ? ಪೊಲೀಸರು ಸಮರ್ಥರಿದ್ದಾರೆ. ತನಿಖೆ ಮಾಡುತ್ತಾರೆ. ಎಸ್‌ಐಟಿ ತನಿಖೆಯ ಬಗ್ಗೆ ಸರ್ಕಾರ ಯಾವುದೇ ಡೈರೆಕ್ಷನ್ಸ್ ಕೊಡುವುದಿಲ್ಲ ಎಂದು ಹೇಳಿದರು.

ಇವತ್ತಿನ ಸಂಪುಟದಲ್ಲಿ ನಾಗಮೋಹನ್ ದಾಸ್ ಅವರು ವರದಿ ನೀಡಿದರು. ಮುಂದಿನ ಸಚಿವ ಸಂಪುಟಕ್ಕೆ ತರುವಂತೆ ಮುಖ್ಯಮಂತ್ರಿಯವರು ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಟ್ಟರು. ಇವತ್ತು ಸಚಿವ ಸಂಪುಟದ ತರುತ್ತಾರೆ.

ನಾಳೆ ನಡೆಯಲಿರುವ ಮತಗಳ್ಳತನದ ವಿರುದ್ಧದ ಪ್ರತಿಭಟನೆಗೆ ಪೊಲೀಸ್ ಆಯುಕ್ತರು ಎಲ್ಲ ರೀತಿಯ ಭದ್ರತೆ ಕೈಗೊಂಡಿದ್ದಾರೆ‌. ಕೇಂದ್ರದಿಂದ ಎಸ್‌ಪಿಜಿ ಯವರು ಬಂದಿದ್ದಾರೆ. ಅವರೊಂದಿಗೆ ನಮ್ಮ ಪೊಲೀಸರು ಸಂಪರ್ಕದಲ್ಲಿದ್ದಾರೆ. ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದು, ಅವರಿಗೂ ಭದ್ರತೆ ಒದಗಿಸುತ್ತೇವೆ ಎಂದರು.

ಸಿಂದಗಿ ಪೊಲೀಸ್ ಠಾಣೆ: ಕಳೆದುಕೊಂಡ ಮೊಬೈಲ್‌ಗಳು ಮಾಲೀಕರಿಗೆ ವಾಪಸ್

ದಿನಾಂಕ 06-08-2025 ರಂದು ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡ ಮೊಬೈಲಗಳನ್ನು CEIR portal ಮೂಲಕ ಪತ್ತೆ ಮಾಡಿ ಮರಳಿ ದೂರುದಾರರಿಗೆ ನೀಡಲಾಯಿತು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಣಪತಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಭೆ

2025 ನೇ ಸಾಲಿನ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸ್ ಅಧೀಕ್ಷಕರು ಮತ್ತು ಸಿಇಓ ಜಿಲ್ಲಾ ಪಂಚಾಯಿತಿ ರವರು
ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಇಂದು ಸಮನ್ವಯ ಸಭೆಯನ್ನು ನಡೆಸಿರುತ್ತಾರೆ.

ಆರ್‌.ಟಿ ನಗರ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಸಂಚಾರ ಜಾಗೃತಿ ಉಪನ್ಯಾಸ

ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಆರ್‌.ಟಿ ನಗರ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.

ಚಿಂತಾಮಣಿ ನಗರದಲ್ಲಿ ”ಮನೆ ಮನೆಗೆ ಪೊಲೀಸ್”

ಚಿಂತಾಮಣಿ ನಗರ ಠಾಣೆಯ ಪೊಲೀಸರು ಠಾಣಾ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ, ಹೊಸ ಬೀಟ್ ವ್ಯವಸ್ಥೆಯಾದ ”ಮನೆ ಮನೆಗೆ ಪೊಲೀಸ್” ಕಾರ್ಯಕ್ರಮದ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಿದ್ದು, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಸೈಬರ್ ಅಪರಾಧಗಳು ಹಾಗೂ ತುರ್ತು ಸಹಾಯವಾಣಿಗಳ ಬಗ್ಗೆ ಅರಿವು ಮೂಡಿಸಿರುತ್ತಾರೆ.

ಕೋಲಾರ ಜಿಲ್ಲಾ ಪೊಲೀಸ್‌ ವತಿಯಿಂದ ನಗರದಲ್ಲಿ ರಾತ್ರಿ ವಿಷೇಶ ಗಸ್ತು

ಕೋಲಾರ ಜಿಲ್ಲಾ ಪೊಲೀಸ್‌ ವತಿಯಿಂದ ಪ್ರತಿ ದಿನ ಅಧಿಕಾರಿ ಸಿಬ್ಬಂದಿಗಳು ಅಪರಾಧ ತಡೆಯುವ ನಿಟ್ಟಿನಲ್ಲಿ ದೈನಂದಿನ ಕರ್ತವ್ಯದೊಂದಿಗೆ ನಗರದಲ್ಲಿ ರಾತ್ರಿ ವಿಷೇಶ ಗಸ್ತು ಕರ್ತವ್ಯವನ್ನು ಕೈಗೊಂಡು ಪ್ರಮುಖ ಸಾರ್ವಜನಿಕ ಸ್ಥಳಗಲಾದ ದೇವಸ್ಥಾನ, ಮಸೀದಿ, ಬಸ್ ನಿಲ್ದಾಣ, ಲಾಡ್ಜ್ ಗಳಿಗೆ ಭೇಟಿ ನೀಡಿ ಹಾಗೂ ಸಂಶಯಾಸ್ಪದ ವ್ಯಕ್ತಿಗಳನ್ನು ಮತ್ತು ATM, ಮತ್ತು ವಾಹನಗಳನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಕಾಲೇಜು ವಿದ್ಯಾರ್ಥಿಗಳಿಗೆ ಸಂಚಾರ ಜಾಗೃತಿ ಉಪನ್ಯಾಸ

ಸಂಚಾರ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಮೇಲೆ ಕೇಂದ್ರೀಕರಿಸಿ ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಈಸ್ಟ್ ವೆಸ್ಟ್ ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದರು.