Thursday, August 13th, 2026 2:58 AM
[ditty id=171]

ಭರ್ಜರಿ ಭೇಟೆಯಾಡಿದ ಮೈಸೂರು ಜಿಲ್ಲಾ ಪೊಲೀಸರು

ಮೈಸೂರು ಜಿಲ್ಲೆಯ ಜಯಪುರ ಹೋಬಳಿ ಮಾರ್ಬಳ್ಳಿಹುಂಡಿ ಗ್ರಾಮದ ಶ್ರೀಮತಿ ಅನಿತಾ.ಎಂ.ಹೆಚ್ ಕೋಂ ಮಂಜುನಾಥ್ ಎಂಬುವವರು ದಿನಾಂಕ: 18-06-2026 ರಂದು ಜಯಪುರ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶ ಎಂದರೆ ತಮ್ಮ ಬಳಿಯಿದ್ದ 58 ಗ್ರಾಂ ತೂಕದ ಚಿನ್ನದ ಲಾಂಗ್ ನೆಕ್ಲೆಸ್ ಮತ್ತು 10 ಗ್ರಾಂ ತೂಕದ ಮುತ್ತಿನ ಚಿನ್ನದ ಓಲೆ & ಜುಮುಕಿಯನ್ನು ಮನೆಯ ಬೀರುವಿನಲ್ಲಿ ಇಟ್ಟಿದ್ದು ದಿನಾಂಕ 15-06-2026 ರಂದು ನೋಡಿದಾಗ ಎರಡೂ ಆಭರಣಗಳು ಕಳುವು ಆಗಿರುವುದು ತಿಳಿದ ಬಂದ ಮೇರೆಗೆ ಅಕ್ಕ-ಪಕ್ಕ ವಿಚಾರ ಮಾಡಿ ಎಲ್ಲೂ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಜಯಪುರ ಪೊಲೀಸ್ ಠಾಣೆಯಲ್ಲಿ ಮೊ.ನಂ 117/2026 ಕಲಂ, 305 ಬಿಎನ್‌ಎಸ್ ರೀತ್ಯ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದಾರೆ.


ಮೈಸೂರು ಗ್ರಾಮಾಂತರ ವೃತ್ತದ ಸಿಪಿಐ ಡಿ.ಬಿ.ಜಯಪ್ರಕಾಶ್ ರವರ ನೇತೃತ್ವದಲ್ಲಿ ಪ್ರಕರಣದ ಪತ್ತೆಗಾಗಿ ನೇಮಿಸಿದ್ದ ಜಯಪುರ ಪೊಲೀಸ್ ಠಾಣಾ ಪಿಎಸ್‌ಐ ಪ್ರಕಾಶ್ ಎತ್ತಿನಮನಿ ಹಾಗೂ ಅಪರಾಧ ಪತ್ತೆ ದಳದ ಸಿಬ್ಬಂದಿಗಳಿಗೆ ಭಾತ್ಮಿದಾರರಿಂದ ದೊರೆತ ಖಚಿತ ವರ್ತಮಾನದ ಮೇರೆಗೆ ದಿನಾಂಕ 30-06-2026 ರಂದು ಬೆಂಗಳೂರಿನ ಮಹಾಲಕ್ಷಿ ಲೇ ಔಟ್‌ನ ಎಪಿಎಂಸಿ ಸಮೀಪ ಆರೋಪಿ ರಂಗೇಗೌಡ ಎಂ.ವಿ @ಸಂತೋಷ ಬಿನ್ ವೆಂಕಟೇಶ, ಎಂಬಾತನನ್ನು ವಶಕ್ಕೆ ತೆಗೆದುಕೊಂಡು, ಆರೋಪಿಯನ್ನು ಕೂಲಂಕುಷವಾಗಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ರಂಗೇಗೌಡನು ಬನ್ನೂರು, ಮೈಸೂರು ದಕ್ಷಿಣ, ಹುಣಸೂರು ಗ್ರಾಮಾಂತರ, ಸಾಲಿಗ್ರಾಮ ಮತ್ತು ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆಗಳಲ್ಲಿ ಕಳ್ಳತನ ಮಾಡಿದ್ದು, ಕಳ್ಳತನ ಮಾಡಿದ್ದ ಚಿನ್ನದ ಆಭರಣಗಳನ್ನು ಹಾಸನ ಟೌನಿನ ದೊಡ್ಡಗರಡಿ ಬೀದಿಯಲ್ಲಿ ಚಿನ್ನಬೆಳ್ಳಿ ಕೆಲಸ ಮಾಡುವ ಮರ‍್ನಾಲ್ಕು ಜನರಿಗೆ ಕೊಟ್ಟು ಹಣವನ್ನು ಪಡೆದುಕೊಂಡಿದ್ದು ಹಾಗೂ ಈಗಾಗಲೇ ಈತನ ಮೇಲೆ ಬೆಂಗಳೂರು, ಮಂಡ್ಯ, ಕೋಲಾರ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಒಟ್ಟು 17 ಕೇಸುಗಳು ದಾಖಲಾಗಿರುವ ವಿಚಾರವು ತಿಳಿದು ಬಂದಿರುತ್ತೆ. ಈತನ ದಸ್ತಗಿರಿಯಿಂದ ವಿವಿಧ ಠಾಣೆಗಳಲ್ಲಿ ವರದಿಯಾಗಿದ್ದ ಒಟ್ಟು 08 ಕಳವು ಪ್ರಕರಣಗಳು ಪತ್ತೆಯಾಗಿರುತ್ತೆ. ಆರೋಪಿಯು ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.

ದಸ್ತಗಿರಿ ಮಾಡಿದ ಆರೋಪಿ ರಂಗೇಗೌಡ ಎಂ.ವಿ @ಸಂತೋಷ ಬಿನ್ ವೆಂಕಟೇಶ, 39 ವರ್ಷ, ಮುದಿಗೆರೆ ಗ್ರಾಮ, ಕಸಬಾ ಹೋಬಳಿ, ಆಲೂರು ತಾಲ್ಲ್ಲೂಕು, ಹಾಸನ ಜಿಲ್ಲೆ. ಆರೋಪಿಯಿಂದ ವಶಪಡಿಸಿಕೊಂಡ ಮಾಲಿನ ವಿವರ
ಒಟ್ಟು 498 ಗ್ರಾಂ ತೂಕದ ಚಿನ್ನದ ಒಡವೆಗಳು. ಒಟ್ಟು ಮೌಲ್ಯ ಸುಮಾರು 65, 25, 000/- ರೂಪಾಯಿಗಳು ಆರೋಪಿ ದಸ್ತಗಿರಿಯಿಂದ ಪತ್ತೆಯಾದ ಇತರೆ ಠಾಣೆಗಳ ಪ್ರಕರಣಗಳು ಪತ್ತೆಯಾಗಿವೆ.

ಠಾಣೆಯ ಹೆಸರು ಪತ್ತೆಯಾದ ಪ್ರಕರಣಗಳ ಸಂಖ್ಯೆ, ಜಯಪುರ ಪೊಲೀಸ್ ಠಾಣೆಯ 02 ಪ್ರಕರಣ, ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಯ 02, ಇಲವಾಲ ಪೊಲೀಸ್‌ ಠಾಣೆಯ 1, ಮೈಸೂರು ದಕ್ಷಿಣ ಪೊಲೀಸ್‌ ಠಾಣೆಯ 1, ಬನ್ನೂರು ಪೊಲೀಸ್‌ ಠಾಣೆಯ 1, ಸಾಲಿಗ್ರಾಮ ಪೊಲೀಸ್‌ ಠಾಣೆಯ 01 ಪ್ರಕರಣ ಸೇರಿ ಒಟ್ಟು 08 ಪ್ರಕರಣಗಳು ಪತ್ತೆಯಾಗಿವೆ ಎಂದು ಮೈಸೂರು ಜಿಲ್ಲಾ ಎಸ್‌ ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯನ್ನು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಲ್ಲಿಕಾರ್ಜುನ ಬಾಲದಂಡಿ, ಐ.ಪಿ.ಎಸ್, ಅಪರ ಪೊಲೀಸ್ ಅಧೀಕ್ಷಕರುಗಳಾದ ಸಿ. ಮಲ್ಲಿಕ್ ಹಾಗೂ ನಾಗೇಶ್.ಎಲ್, ಮೈಸೂರು ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರಾಜಣ್ಣ ರವರ ಮಾರ್ಗದರ್ಶನದಲ್ಲಿ ಸಿಪಿಐ ಡಿ.ಬಿ.ಜಯಪ್ರಕಾಶ್, ಜಯಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರಕಾಶ್ ಎತ್ತಿನಮನಿ ರವರು ಹಾಗೂ ಸಿಹೆಚ್‌ಸಿ-೨೩೧ ಪಚ್ಚೇಗೌಡ, ಪಿಸಿ-೩೯ ನಿಂಗಣ್ಣ ರವರುಗಳು ಮೇಲ್ಕಂಡ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚಿ ಪ್ರಕರಣಗಳನ್ನು ಬೇದಿಸುವಲ್ಲಿ ಯಶಸ್ವಿಯಾಗಿರೆ.

Related Articles

TRENDING ARTICLES

error: Content is protected !!