Saturday, February 14th, 2026 11:15 AM
[ditty id=171]

ಕಬ್ಬಿಣದ ಸೆಂಟ್ರಿಂಗ್ ಸೀಟ್ ಕಳ್ಳತನ: ಅಂತರ್ ಜಿಲ್ಲಾ ಕಳ್ಳರ ಬಂಧನ

ಹೊನ್ನಾವರ: ಕಟ್ಟಡ ಕಾಮಗಾರಿ ಸ್ಥಳದಿಂದ ಕಬ್ಬಿಣದ ಸೆಂಟ್ರಿಂಗ್ ಸೀಟ್‌ಗಳನ್ನು ಕಳ್ಳತನ ಮಾಡಿದ್ದ ಅಂತರ್ ಜಿಲ್ಲಾ ಕಳ್ಳರ ತಂಡವೊಂದನ್ನು ಹೊನ್ನಾವರ ಪೊಲೀಸರು ಬಂಧಿಸಿ ಆರೋಪಿಗಳಿಂದ ₹5 ಲಕ್ಷ ಮೌಲ್ಯದ ಕಳವು ಮಾಡಿದ ಸ್ವತ್ತು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ತವೀರ ಅಹಮ್ಮದ, ಷಹಾದ್-ಉಲ್ಲಾ, ಮಹ್ಮದ ಮನ್ಸೂರ, ಮತ್ತು ಕಲೀಮುಲ್ಲಾ ಅಲಿಯಾಸ್ ಕಲೀಂ ಬಂಧಿತ ಆರೋಪಿಗಳು.

ಕಳೆದ ತಿಂಗಳು, ಕಾಸರಕೋಡ ರೋಷನ್ ಮೊಹಲ್ಲಾದಲ್ಲಿನ ಮಸೀದಿ ಹತ್ತಿರ ನಿರ್ಮಾಣವಾಗುತ್ತಿದ್ದ ಕಟ್ಟಡವೊಂದರ ಬಳಿ ಇಟ್ಟಿದ್ದ ಕಬ್ಬಿಣದ ಸೆಂಟ್ರಿಂಗ್ ಸೀಟ್‌ಗಳು ಕಳವಾಗಿತ್ತು. ಜುಲೈ 15ರ ರಾತ್ರಿ 7 ಗಂಟೆಯಿಂದ ಜುಲೈ 16ರ ಬೆಳಗ್ಗೆ 9 ಗಂಟೆಯ ನಡುವಿನ ಅವಧಿಯಲ್ಲಿ ಈ ಕೃತ್ಯ ನಡೆದಿತ್ತು. ಈ ಬಗ್ಗೆ ಶ್ರೀ ರಾಮಾ ಲಕ್ಷ್ಮಣ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ತಾಂತ್ರಿಕ ಹಾಗೂ ಖಚಿತ ಮಾಹಿತಿಯ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ₹2 ಲಕ್ಷ ಮೌಲ್ಯದ 180 ಕಬ್ಬಿಣದ ಸೆಂಟ್ರಿಂಗ್ ಸೀಟ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ₹3 ಲಕ್ಷ ಮೌಲ್ಯದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ₹5 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

Related Articles

TRENDING ARTICLES

error: Content is protected !!