ದಾವಣಗೆರೆ: ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ IPS ರವರು
ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ಒಳಗೊ೦ಡ ದಾವಣಗೆರೆ ಜಿಲ್ಲಾ ಮಾದಕ ದ್ರವ್ಯ ನಿಗ್ರಹ
ಪಡೆಯನ್ನು ರಚಿಸಿದ್ದು, ದಾವಣಗೆರೆ ಜಿಲ್ಲೆಯನ್ನು ಮಾದಕ ವ್ಯಸನಮುಕ್ತ ಜಿಲ್ಲೆಯನ್ನಾಗಿಸುವ
ಕಾರ್ಯದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲು ಸೂಚನೆ ನೀಡಿರುತ್ತಾರೆ.
ದಿನಾಂಕ 07-08-2025 ರಂದು ಸಂಜೆ ಸಮಯದಲ್ಲಿ ದಾವಣಗೆರೆ ನಗರದ ಯರಗುಂಟಿ ಗ್ರಾಮದ ಸಮೀಪದ ಕೊಂಡಜ್ಜಿ ರಸ್ತೆಯ ಹತ್ತಿರದ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಯಾರೋ ಇಬ್ಬರು ಅಕ್ರಮವಾಗಿ ಗಾ೦ಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಶ್ರೀ ಸಾಗರ್ ಅಟ್ಟರ್ ವಾಲ್ PSI ಮಾದಕ ದ್ರವ್ಯ ನಿಗ್ರಹ ಪಡೆ ದಾವಣಗೆರೆ ಜಿಲ್ಲೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ IPS ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪರಮೇಶ್ವರ ಹೆಗಡೆ ರವರ ಹಾಗೂ ದಾವಣಗೆರೆ ನಗರ ಉಪ ವಿಭಾಗದ DYSP ರವರಾದ ಶ್ರೀ ಶರಣಬಸವೇಶ್ವರ ಬಿ ರವರ ಮಾರ್ಗದರ್ಶನದಲ್ಲಿ ಮತ್ತು ಪತ್ರಾಂಕಿತ ಅಧಿಕಾರಿಗಳು ಹಾಗೂ ಪಂಚರ ಉಪಸ್ಥಿತಿಯಲ್ಲಿ, ಜಿಲ್ಲಾ ಮಾದಕ ದ್ರವ್ಯ ನಿಗ್ರಹ ಪಡೆಯ PSI ಸಾಗರ್ ಅತ್ತರ್ ವಾಲ್ & ಸಿಬ್ಬಂದಿಗಳು ಹಾಗೂ ದಾವಣಗೆರೆ ನಗರ ಠಾಣೆಯ PSI ಶ್ರೀ ರವಿ
ನಾಯ್ಕ್, ಶ್ರೀಮತಿ ಲಲಿತಮ್ಮ ಹಾಗೂ ಸಿಬ್ಬಂದಿಗಳನ್ನೊಳಗೊ೦ಡ ತಂಡವು ಮೇಲ್ಕಂಡ ಸ್ವಳಕ್ಕೆ ದಾಳಿ
ಮಾಡಿ ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದ ಆರೋಪಿತರಾದ 1) ದಸ್ತಗಿರಿ, 35 ವರ್ಷ ರಾಜೀವಗಾಂಧಿ ಬಡಾವಣೆ ದಾವಣಗೆರೆ ರವರುಗಳನ್ನು ಬಂಧಿಸಿದ್ದು ಆರೋಪಿತರಿಂದ ಮಾರಾಟ ಮಾಡಲು ತಮ್ಮ ಬಳಿ ಇದ್ದ ಬೈಕಿನಲ್ಲಿ ಇಟ್ಟುಕೊಂಡಿದ್ದ 1220 ಗ್ರಾಂ ಗಾಂಜಾ ಸೊಪ್ಪು 2) ಒಂದು ಹೊಂಡಾ, ಆಕ್ಟಿವಾ ಸೂಟರ್ ಅನ್ನು (ಅಂದಾಜು 2,00,000 ಮೌಲ್ಯದ ಸ್ವತ್ತು) ವಶಪಡಿಸಿಕೊಳ್ಳಲಾಗಿರುತ್ತದೆ.
ಸದರಿ ಕಾರ್ಯಚರಣೆಯಲ್ಲಿ ಶ್ರೀ ಜಿ ಮಂಜುನಾಥ ರವರ ಹಾಗೂ ದಾವಣಗೆರೆ ಗ್ರಾಮಾ೦ತರ ಉಪ ವಿಭಾಗದ DYSP ರವರಾದ ಬಸವರಾಜ್ ಬಿ ಎಸ್ ರವರು, ಮಾದಕ ದ್ರವ್ಯ ನಿಗ್ರಹ ಪಡೆಯ PSI ಶ್ರೀ ಸಾಗರ್ ಅತ್ತರ್ ವಾಲ್ & ಸಿಬ್ಬಂದಿಗಳಾದ ಪ್ರಕಾಶ್, ಮ೦ಜುನಾಥ, ಷಣ್ಮಖ, ಶಿವರಾಜ, ಗೋವಿಂದರಾಜ್, ಗಾಂಧಿನಗರ ಠಾಣೆಯ ಪಿ.ಎಸ್.ಐ ಶ್ರೀ ರವಿನಾಯ್ಕ್ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಪೂಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ IPS, ರವರು ಪ್ರಶಂಸಿಸಿದರು.